ಬೆಳ್ತಂಗಡಿ: ಆಭರಣ ರಂಗದಲ್ಲಿ ತನ್ನದೇ ಆದ ವಿಶ್ವಾಸಾರ್ಹತೆ ಗಳಿಸಿರುವ ಮುಳಿಯ ಜ್ಯುವೆಲ್ಲರ್ಸ್ ಇದೀಗ ವಾಚ್ ಉದ್ಯಮಕ್ಕೂ ಕಾಲಿಟ್ಟಿದೆ.





ಬೆಳ್ತಂಗಡಿಯ ಮುಳಿಯ ಗೋಲ್ಡ್ & ಡೈಮಂಡ್ಸ್ ಮಳಿಗೆಯಲ್ಲಿ ನೂತನ ಉದ್ಯಮವಾದ ‘ಮುಳಿಯಾಸ್ ಟೈಮ್ ಜೋನ್’ ವಾಚ್ ಶೋರೂಂ ಜೂನ್ 4 ರಂದು ಅದ್ಧೂರಿಯಾಗಿ ಶುಭಾರಂಭಗೊಂಡಿತು.
ಮುಳಿಯ ಗೋಲ್ಡ್ & ಡೈಮಂಡ್ಸ್ ಎಂ.ಡಿ. ಕೃಷ್ಣ ನಾರಾಯಣ ಮುಳಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ನೂತನ ಮಳಿಗೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕಾಮಿಡಿ ಕಿಲಾಡಿ ಮತ್ತು ಚಲನಚಿತ್ರ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನ ವ್ಯವಸ್ಥಾಪಕರಾದ ಲೋಹಿತ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿನ್ಯಾಸ್ ಭಂಡಾರಿ ನೆರವೇರಿಸಿಕೊಟ್ಟರು.







