ಕಲ್ಮಂಜ : ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜೂನ್ 5ರಂದು ಸಿದ್ಧಬಯಲು ಪರಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.




ಪರಿಸರವು ನಮ್ಮ ಜೀವನಾಡಿ ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಹಸಿರು ಭವಿಷ್ಯವನ್ನು ನಿರ್ಮಿಸುವುದರೊಂದಿಗೆ ಸಂರಕ್ಷಣೆ ಬದುಕಿನ ಭದ್ರತೆಯಾಗಿದೆ. ಪರಿಸರ ದಿನದಂದು ಪ್ರತಿಯೊಬ್ಬರೂ ಒಂದು ಗಿಡನೆಟ್ಟು ಭೂಮಾತೆಯ ಋಣ ತೀರಿಸೋಣ..
ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ದಿನೇಶ್ ಗೌಡ ಬನದಬೈಲು ಉಪಾಧ್ಯಕ್ಷರಾದ ಭವ್ಯ ಮುಂಚಾಣ, ಶಾಲಾ ಮುಖ್ಯೋಪಾಧ್ಯಯರಾದ ಧರ್ಣಮ್ಮ, ಶಿಕ್ಷಕರಾದ ಶ್ರೀಮತಿ ಮಮತಾ ಹಾಗೂ ಪುರುಷೋತ್ತಮ ಹೊಸಮನೆ, ಕೃಷ್ಣಪ್ಪ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.







