ಕೊರಿಂಜ: ಈ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇದರ ಮಾಜಿ ಆಡಳಿತ ಮೋಕ್ತೇಸರರಾದ ಶ್ರೀ ದಿನಕರ ಪೂಜಾರಿ ಕಡ್ತಿಲ ಇವರು ಇತ್ತೀಚೆಗೆ ದೈವಧೀನರಾಗಿರುತ್ತಾರೆ.


ಅವರ ಆತ್ಮಕ್ಕೆ ಸಗ್ದತಿ ದೊರಕಲೆಂದು ದೇವರಲ್ಲಿ ಪ್ರಾರ್ಥಿಸುತ್ತಾ ಈ ಕುರಿತು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಆಡಳಿತ ಸಮಿತಿ ಮತ್ತು ಬಯಲುವಾರು ಸಮಿತಿ ಹಾಗೂ ಊರವರು ಸೇರಿ ನುಡಿ ನಮನ ಕಾರ್ಯಕ್ರಮವನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಯೋಗೀಶ್ ಪೂಜಾರಿ ಕಡ್ತಿಲ ಜೀರ್ಣೋದ್ಧರ ಸಮಿತಿಯ ಅಧ್ಯಕ್ಷರಾದ ದಾಸಪ್ಪಗೌಡ ಕೋಡ್ಯಡ್ಕ ಪವಿತ್ರ ವಾಣಿ ಹರೀಶ್ ತಾಳಿಂಜ, ಊರ ಗಣ್ಯರಾದ ತಿಲಕ್ ಉರುವಾಲು, ರವಿರಾಜ ಮಂದಿರ ಉರುವಾಲು,

ಕಲ್ಲೇರಿ ನವಚೇತನ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ಶೆಟ್ಟಿ, ಶ್ಯಾಮ್ ಭಟ್ ವಾದ್ಯ ಕೋಡಿ, ಸೇಸಪ್ಪ ರೈ ಕೊರಿಂಜ, ಶಂಕರ ನಾರಾಯಣ ಭಟ್ ಸಾಮೆಗುಳಿ, ಸೇಸಪ್ಪ ಗೌಡ ಮಜಿಕುಡೇಲು, ಪ್ರಕಾಶ್ ಪಾಂಗಣ್ಣಾಯ, ಲಿಂಗಪ್ಪ ನಾಯ್ಕ ಮುರತ್ತಕೋಡಿ, ಜನಾರ್ದನ ಗೌಡ ನಾಕಾಲು, ಆಡಳಿತ ಸಮಿತಿಯ ಸದಸ್ಯರು, ಗ್ರಾಮಸ್ಥರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು, ಅಭಿಮಾನಿ ಬಳಗ ಹಾಗೂ ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೀತಾರಾಮ ಆಳ್ವ ಕೊರಿಂಜ ನಿರೂಪಿಸಿದರು.







