ಇಂದಬೆಟ್ಟು: ಇಲ್ಲಿಯ ಪಲ್ಲದಕೋಡಿ ನಿವಾಸಿ, ಮಡಂತ್ಯಾರಿನ ನೂತನ್ ಕ್ಲೋತ್ ಸೆಂಟರ್ ಸಿಬ್ಬಂದಿ ಜಗದೀಶ್ (35 ವರ್ಷ) ಅವರು ಜೂನ್ 14ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.


ಮೃತ ಜಗದೀಶ್ ಅವರು ಕಳೆದ ಸುಮಾರು 12 ವರ್ಷಗಳಿಂದ ಮಡಂತ್ಯಾರಿನ ಪ್ರಸಿದ್ಧ “ನೂತನ್ ಕ್ಲೋತ್ ಸೆಂಟರ್”ನಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು.

ಮೃತರು ತಂದೆ ಜಯ ಪೂಜಾರಿ, ತಾಯಿ ಸುಂದರಿ, ಸಹೋದರರು ಹಾಗೂ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ.







