ಬಂಟ್ವಾಳ: ಬಂಟ್ವಾಳ: ಹೆತ್ತವರು ಕೆಲಸಕ್ಕೆ ತೆರಳಿದ್ದ ವೇಳೆ ಯುವತಿಯೊಬ್ಬಳು ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಬರಿಮಾರಿನಲ್ಲಿ ಬೆಳಕಿಗೆ ಬಂದಿದೆ. ನಾಪತ್ತೆಯಾದ ಯುವತಿಯನ್ನು ಬರಿಮಾರು ನಿವಾಸಿ ಮಾದೇವಿ (21) ಎಂದು ಗುರುತಿಸಲಾಗಿದೆ.


ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ:
ನಾಪತ್ತೆಯಾದ ಮಾದೇವಿ ಕಳೆದ ಆರು ತಿಂಗಳಿನಿಂದ ಧಾರವಾಡದ ಖಾಸಗಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚೆಗಷ್ಟೇ ಕೆಲಸ ಬಿಟ್ಟು ಊರಿಗೆ ಮರಳಿದ್ದಾಳೆ. ಅಂದಿನಿಂದ ಹೆತ್ತವರ ಜೊತೆಯಲ್ಲೇ ಮನೆಯಲ್ಲಿ ವಾಸವಾಗಿದ್ದಳು.


ಚಿನ್ನ, ಹಣದೊಂದಿಗೆ ನಾಪತ್ತೆ?
ಹೆತ್ತವರು ಎಂದಿನಂತೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಾದೇವಿ ಮನೆಯಿಂದ ನಾಪತ್ತೆಯಾಗಿದ್ದಾಳೆ. ಮನೆಯಿಂದ ಹೊರಡುವಾಗ ಆಕೆ ತನ್ನೊಂದಿಗೆ ನಗದು ಹಾಗೂ ಚಿನ್ನಾಭರಣಗಳನ್ನು ತಗೆದುಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ತನಿಖೆ ಚುರುಕು:
ಮಗಳ ನಾಪತ್ತೆಯಿಂದ ಆತಂಕಗೊಂಡಿರುವ ಪೋಷಕರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.




