ಕಾರ್ಕಳ: ವಿಶ್ವ ರಕ್ತದಾನಿಗಳ ದಿನವಾದ ಜೂನ್ 14ರಂದು ಡಾ. ಟಿ.ಎಮ್.ಎ. ಪೈ ರೋಟರಿ ಆಸ್ಪತ್ರೆ ಇಲ್ಲಿ ನಾಲ್ಕನೇ ವರ್ಷದ ವಿನಾಯಕ ಫ್ರೆಂಡ್ಸ್ ಕಾರ್ಕಳ ಮತ್ತು ಶ್ರೀ ರವಿಶಂಕರ್ ಗುರೂಜಿ ಶಾಲೆಯ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಜರಗಿತು.


ಈ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚಿನ ದಾನಿಗಳು ಅತೀ ಉತ್ಸಾಹದಿಂದ ಭಾಗವಹಿಸಿದ್ದು, 80 ಯೂನಿಟ್ ರಕ್ತವು ಸಂಗ್ರಹವಾಗಿರುತ್ತದೆ.

ಶಿಬಿರದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತು ವಿನಾಯಕ ಫ್ರೆಂಡ್ಸ್ ನ ಸದಸ್ಯರು, ಶ್ರೀ ರವಿಶಂಕರ್ ಗುರೂಜಿ ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಕಾರ್ಯಕ್ರಮವನ್ನು ನೆರವೇರಿಸಿದರು.





