ಮಂಗಳೂರು : ತುಳುನಾಡಿನ ಸಾಂಪ್ರದಾಯಿಕ, ಹೆಮ್ಮೆಯ ಜಾನಪದ ಕ್ರೀಡೆಯಾದ ಕಂಬಳದ ಸೀಸನ್ ಹತ್ತಿರವಾಗುತ್ತಿದ್ದು, ಕಂಬಳ ಅಭಿಮಾನಿಗಳಲ್ಲಿ ರೋಮಾಂಚನ ಶುರುವಾಗಿದೆ.

ಇದೀಗ 2026-27ನೇ ಸಾಲಿನ ಕಂಬಳದ ತಾತ್ಕಾಲಿಕ ವೇಳಾಪಟ್ಟಿ ಅಧಿಕೃತವಾಗಿ ಹೊರಬಿದ್ದಿದ್ದು, ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಒಟ್ಟು 27 ಪ್ರಮುಖ ಸ್ಥಳಗಳಲ್ಲಿ ಕಂಬಳ ಕೂಟಗಳು ಜರುಗಲಿವೆ.ಅಕ್ಟೋಬರ್ ತಿಂಗಳಿನಿಂದ ಆರಂಭಗೊಂಡು ಮುಂದಿನ ವರ್ಷದ ಏಪ್ರಿಲ್ ತಿಂಗಳವರೆಗೆ ಕರಾವಳಿಯಾದ್ಯಂತ ಕೆಸರುಗದ್ದೆಗಳಲ್ಲಿ ಕೋಣಗಳ ಗತವೈಭವದ ಓಟು ಸದ್ದು ಮಾಡಲಿದೆ.

ಮೈಸೂರಿನಿಂದ ಆರಂಭ, ಬಡಗಬೆಟ್ಟಿನಲ್ಲಿ ಮುಕ್ತಾಯ!:
ಈ ಬಾರಿಯ ಕಂಬಳದ ಋತುವು ಎಂದಿನಂತೆ ವಿಭಿನ್ನ ಹಾಗೂ ಅದ್ಧೂರಿಯಾಗಿ ಮೂಡಿಬರಲು ಸಜ್ಜಾಗಿದೆ. ಅಕ್ಟೋಬರ್ 11 ಮತ್ತು 17 ರಂದು ಮೈಸೂರಿನಲ್ಲಿ ನಡೆಯಲಿರುವ ಕಂಬಳದೊಂದಿಗೆ ಈ ಸೀಸನ್ ಅದ್ಧೂರಿ ಚಾಲನೆ ಪಡೆದುಕೊಳ್ಳಲಿದೆ. ಆ ಬಳಿಕ ನವೆಂಬರ್ನಿಂದ ಸತತವಾಗಿ ಕರಾವಳಿಯ ವಿವಿಧ ಐತಿಹಾಸಿಕ ಗದ್ದೆಗಳಲ್ಲಿ ಕಂಬಳದ ಜೋಡುಕೋಣಗಳು ಧೂಳೆಬ್ಬಿಸಲಿವೆ. ಕೊನೆಯದಾಗಿ 2027ರ ಏಪ್ರಿಲ್ 24 ರಂದು ಬಡಗಬೆಟ್ಟಿನಲ್ಲಿ ನಡೆಯಲಿರುವ ಕಂಬಳ ಕೂಟದೊಂದಿಗೆ ಈ ಸೀಸನ್ಗೆ ತೆರೆ ಬೀಳಲಿದೆ.

ಮೈಸೂರು: ಅಕ್ಟೋಬರ್ 11 ಅಥವಾ ಅಕ್ಟೋಬರ್ 17
ಪಣಿಪಿಲ: ನವೆಂಬರ್ 7
ಸಾಣೂರು: ನವೆಂಬರ್ 14
ಕೊಡಂಗೆ ನವೆಂಬರ್ 21
ಕಕ್ಯಪದವು: ನವೆಂಬರ್ 28
ಹೊಕ್ಕಾಡಿಗೋಳಿ: ಡಿಸೆಂಬರ್ 5
ಬಾರಾಡಿಬೀಡು: ಡಿಸೆಂಬರ್ 12
ಮಂಗಳೂರು: ಡಿಸೆಂಬರ್ 19
ಮೂಲ್ಕಿ: ಡಿಸೆಂಬರ್ 26
ಬಳ್ಳಮಂಜ: ಡಿಸೆಂಬರ್ 27
ಮಿಯ್ಯಾರು: ಜನವರಿ 2
ನರಿಂಗಾನ: ಜನವರಿ 9
ಅಡ್ವೆ: ಜನವರಿ 16
ಮೂಡುಬಿದಿರೆ: ಜನವರಿ 23
ಪುತ್ತೂರು: ಜನವರಿ 30
ಐಕಳ: ಫೆಬ್ರವರಿ 6
ಜಪ್ಪಿನಮೊಗರು: ಫೆಬ್ರವರಿ 13
ವಾಮಂಜೂರು: ಫೆಬ್ರವರಿ 20
ಎರ್ಮಾಳ್: ಫೆಬ್ರವರಿ 27
ಬಂಟ್ವಾಳ: ಮಾರ್ಚ್ 6
ಬಂಗಾಡಿ: ಮಾರ್ಚ್ 13
ವೇಣೂರು: ಮಾರ್ಚ್ 20
ಉಪ್ಪಿನಂಗಡಿ: ಮಾರ್ಚ್ 27
ಗುರುಪುರ: ಏಪ್ರಿಲ್ 3
ಬಳಕುಂಜೆ: ಏಪ್ರಿಲ್ 10
ಹರೇಕಳ: ಏಪ್ರಿಲ್ 17
ಬಡಗಬೆಟ್ಟು : ಎಪ್ರಿಲ್ 24





