ಬಿದ್ಕಲ್ ಕಟ್ಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಬಿದ್ಕಲ್ ಕಟ್ಟೆ ವಲಯ ಸಭೆಯು ಶ್ರೀ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರು ಹಾಗೂ ರಾಜ್ಯಭಜನಾ ಪರಿಷತ್ತಿನ ಉಪಾಧ್ಯಕ್ಷರಾದ ಶ್ರೀ ರಾಜೇಂದ್ರ ಕುಮಾರ್ ಬಸ್ರುರೂ ರವರು ವಹಿಸಿ ಕ್ಷೇತ್ರದ ಬಗ್ಗೆ ಹಾಗೂ 28ನೇ ವರ್ಷದ ಭಜನಾ ಕಮ್ಮಟದ ಪೂರ್ವ ತಯಾರಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.

ಯೋಜನೆಯ ಕಾರ್ಯಕ್ಷೇತ್ರಕ್ಕೆ ಅನುಗುಣವಾಗಿ ಹಾಲಾಡಿ ವಲಯದ ಭಜನಾ ಮಂಡಳಿಗಳನ್ನು ಬಿದ್ಕಲ್ ಕಟ್ಟೆ ವಲಯಕ್ಕೆ ವಿಲೀನಗೊಳಿಸುವುದಾಗಿ ತೀರ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್ ಸಭೆಯಲ್ಲಿನ ಗಣ್ಯರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬಿದ್ಗಲ್ ಕಟ್ಟೆವಾಲಯದ ಮೇಲ್ವಿಚಾರಕರಾದಂತಹ ಶ್ರೀಮತಿ ಶರ್ಮಿಳ, ಪರಿಷತ್ತಿನ ವಲಯ ಸಂಯೋಜಕಿ ಶ್ರೀಮತಿ ಯಶೋಧ ಕಾರ್ಯದರ್ಶಿ ಶ್ರೀ ಹರೀಶ್ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ರಮೇಶ್ ಪೂಜಾರಿ ಶ್ರೀ ದುರ್ಗಾ ಲಕ್ಷ್ಮಿ ಜನಾರ್ಧನ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀ ಶುಭಕರ ಶೆಟ್ಟಿ ವಲಯದ ಎಲ್ಲ ಭಜನ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸದಸ್ಯರು ಉಪಸ್ಥಿತರಿದ್ದರು.
ಶ್ರೀಮತಿ ವಿಶಾಲ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.







