ಆಂಧ್ರಪ್ರದೇಶ: ಮಧ್ಯರಾತ್ರಿ 2:30… ತಾಯಿಯ ಕೋಣೆಗೆ ಹೊರಗಿನಿಂದ ಲಾಕ್ ಮಾಡಿ, ನಗ್ನ ಸ್ಥಿತಿಯಲ್ಲಿ ಬೀದಿಯಲ್ಲಿ ಓಡಿಬಂದ 25 ವರ್ಷದ ಯುವತಿ! ಸ್ಥಳೀಯ ದೇವಸ್ಥಾನ ಹೊಕ್ಕು, ವಿಗ್ರಹವನ್ನು ಹಿಡಿದುಕೊಂಡು ಕೆರೆಗೆ ಜಿಗಿದು ಪ್ರಾಣ ಬಿಟ್ಟಿದ್ದಾಳೆ! ಸಾಫ್ಟ್ವೇರ್ ಎಂಜಿನಿಯರ್ ತೇಜಸ್ವಿನಿಯ ಈ ನಿಗೂಢ ಸಾವು ಈಗ ತೆಲಂಗಾಣ-ಆಂಧ್ರಪ್ರದೇಶ ಎರಡೂ ರಾಜ್ಯಗಳಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ!

ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ದೇವಪಲ್ಲಿ ಮೂಲದ ವಕ್ಕುಲಗಡ್ಡಿ ಈಶ್ವರ್ ರಾವ್ ಮತ್ತು ಅರುಣಾ ದಂಪತಿಯ ಪುತ್ರಿ ತೇಜಸ್ವಿನಿ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈಕೆ, ಕೆಲಸದ ತೀವ್ರ ಒತ್ತಡ ತಾಳಲಾರದೆ 6 ತಿಂಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.

ತದನಂತರ ವಿಶಾಖಪಟ್ಟಣಕ್ಕೆ ತೆರಳಿ, ಕಳೆದ 2 ತಿಂಗಳಿಂದ ಹೈದರಾಬಾದ್ನ ಪೀರ್ಜಾದಿಗುಡದ ಶಂಕರ್ನಗರ ಕಾಲೋನಿಯಲ್ಲಿ ತಾಯಿ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಆದರೆ, ಶುಕ್ರವಾರ ಮಧ್ಯರಾತ್ರಿ 2:30ರ ಸುಮಾರಿಗೆ ನಡೆದ ಘಟನೆ ಇಡೀ ವಾತಾವರಣವನ್ನೇ ಬೆಚ್ಚಿಬೀಳಿಸಿದೆ. ಎಚ್ಚರಗೊಂಡ ತೇಜಸ್ವಿನಿ, ತಾಯಿ ಮಲಗಿದ್ದ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ ಬೆತ್ತಲೆಯಾಗಿ ಮನೆಯಿಂದ ಹೊರಟಿದ್ದಾರೆ. ಅಷ್ಟಕ್ಕೇ ಮುಗಿಯಲಿಲ್ಲ… ನಗ್ನ ಸ್ಥಿತಿಯಲ್ಲೇ ಸಮೀಪದ ದೇವಸ್ಥಾನ ಪ್ರವೇಶಿಸಿದ ಆಕೆ, ಅಲ್ಲಿದ್ದ ದೇವಿಯ ವಿಗ್ರಹವನ್ನು ಕೈಯಲ್ಲಿ ಹಿಡಿದುಕೊಂಡು ಓಡಿಹೋಗಿ ಪಕ್ಕದಲ್ಲಿದ್ದ ಕೆರೆಗೆ ಧುಮುಕಿದ್ದಾಳೆ!

ಬೆಳಿಗ್ಗೆ ತಾಯಿ ಹೊರ ಬರಲಾಗದೆ ಕಿರುಚಾಡಿದಾಗ ನೆರೆಹೊರೆಯವರು ಬಾಗಿಲು ತೆರೆದಿದ್ದಾರೆ. ಆದರೆ ಮಗಳು ಕಾಣೆಯಾಗಿದ್ದನ್ನು ಕಂಡು ಹುಡುಕಾಟ ನಡೆಸಿದಾಗ ಕೆರೆಯಲ್ಲಿ ತೇಜಸ್ವಿನಿಯ ಶವ ಪತ್ತೆಯಾಗಿದೆ.

ಪೊಲೀಸರು ಪ್ರಸ್ತುತ ಕೆರೆಯಲ್ಲಿ ಮುಳುಗಡೆಯಾಗಿರುವ ದೇವಿಯ ವಿಗ್ರಹಕ್ಕಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಆಕೆ ಆತ್ಮಹತ್ಯೆಗೆ ಶರಣಾಗಿದ್ದರೂ, ಆಯ್ದುಕೊಂಡ ವಿಚಿತ್ರ ಹಾಗೂ ಭೀಕರ ಮಾರ್ಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಆಕೆಯ ಮಾನಸಿಕ ಸ್ಥಿತಿ ಅಥವಾ ಬೇರೇನಾದರೂ ದುಷ್ಟ ಶಕ್ತಿಗಳ ಪ್ರಭಾವವಿತ್ತೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.






