ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ. ಕಾಪು ತಾಲೂಕು ಉಚ್ಚಿಲ ವಲಯದ ಬೆಳಪು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು


ಈ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪತ್ರಕರ್ತರಾದ ರಾಕೇಶ್ ಕುಂಜೂರ್ ಅವರು ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಮಕ್ಕಳಲ್ಲಿ ದುಶ್ಚಟದ ಬಗ್ಗೆ ಅದರಿಂದ ಆಗಿರುವ ಪರಿಣಾಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು.

ಒಂದು ಮನುಷ್ಯ ಭವಿಷ್ಯವನ್ನೆ ಸಂಪೂರ್ಣ ಹಾಳು ಮಾಡುವ, ಪಶ್ಚಾತಾಪ ಪರಿಹಾರ ಅಲ್ಲ, ಜಾಗೂರು ಕತೆಯಿಂದ ಉತ್ತಮ ನಾಗರೀಕರಾಗಿರಿ ಎಂದರು. ಈ ಕಾರ್ಯಕ್ರಮದಲ್ಲಿ ಕಾಪು ತಾಲೂಕಿನ ಯೋಜನಾಧಿಕಾರಿಗಳು ಮಕ್ಕಳಿಗೆ ಪ್ರಮಾಣ ವಚನ ನೀಡಿ ಮಕ್ಕಳು ಉತ್ತಮ ಶಿಕ್ಷಣ ಜೊತೆಗೆ ಉತ್ತಮ ಭವಿಷ್ಯ ರೂಪಿಸಲಿ ಎಂದು ಶುಭ ಹಾರೈಸಿದರು.


ಶಾಲೆಯ ಮುಕ್ಯೋಪಾಧ್ಯಾಯರಾದ ಆಶಾ ಮೇಡಂ ಎಲ್ಲರಿಗು ಧನ್ಯವಾದಗಳನ್ನು ತಿಳಿಸಿದರು. ಶಾಲೆಯ ಎಲ್ಲಾ ಅಧ್ಯಕಪಕರು ಉಪಸ್ಥಿತರಿದ್ದರು ವಲಯ ಮೇಲ್ವಿಚಾರಕಿ ವಿನುತಾ ಎಲ್ಲರನ್ನು ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸವಿತಾ ಶೆಟ್ಟಿ 8,9,10 ನೇ ತರಗತಿಯ ಮಕ್ಕಳು ಉಪಸ್ಥಿತರಿದ್ದರು.






