ಮಂಗಳೂರು: ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ ಶ್ರೀ ಕೃಷ್ಣ ಭಜನಾ ಮಂಡಳಿ( ರಿ.) ಸುದರ್ಶನ ನಗರ ಪಜೀರು ಉಳ್ಳಾಲ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಮಂಗಳೂರು ಇದರ ಸಹಯೋಗದೊಂದಿಗೆ ಕೊಣಾಜೆ ವಲಯದ ಪಜೀರ್ ಸುದರ್ಶನ ನಗರ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ “ಸಂಸ್ಕಾರ ಮತ್ತು ಭಜನಾ ತರಬೇತಿ ಶಿಬಿರ” ಹಿರಿಯ ಭಜನಾ ಗುರುಗಳಾದ ರವಿ ಮಂಜನಾಡಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.


ಭಜನಾ ಮಂದಿರದ ಅಧ್ಯಕ್ಷರಾದ ಯಶೋಧರ ಜೋಗಿಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ತಾಲೂಕು ಯೋಜನಾಧಿಕಾರಿಗಳಾದ ಚಂದ್ರಶೇಖರ್, ಸರ್ವೋದಯ ಯುವಕ ಮಂಡಲದ ಅಧ್ಯಕ್ಷರಾದ ಲೋಹಿತ್, ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು,ಮಂಗಳೂರು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಉಮೇಶ್ ಗಟ್ಟಿ, ತುಳಸಿ ಮಾತೃ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸುಮತಿ ಆಂಡಿ, ಉದಯ್ ಕೊಣಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ತರಬೇತಿ ನಡೆಸಲಾಯಿತು. ಮಂದಿರದ ವತಿಯಿಂದ ಎಲ್ಲಾ ಭಜಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲು ಹಾಗೂ ಉದಯ್ ರವರು ನೀಡಿದ ಪುಸ್ತಕ ಮತ್ತು ಪೆನ್ನು ವಿತರಿಸಲಾಯಿತು.

ಭಜನಾ ಸಂಚಾಲಕರು ವಸಂತ ಜಿ ಸುದರ್ಶನನಗರ, ವಲಯ ಮೇಲ್ವಿಚಾರಕರಾದ ಗಿರೀಶ್, ಮಂದಿರದ ಉಪಾಧ್ಯಕ್ಷರಾದ ಸದಾಶಿವಶೆಟ್ಟಿ, ಗೌರವ ಸಲಹೆಗಾರರಾದ ಸೇಸಪ್ಪ ಟೈಲರ್ ತುಕ್ಕೋಜಿ ರಾವ್, ಯೋಗ ಶಿಕ್ಷಕರಾದ ವಸಂತ ಅಡ್ಕ ಹಾಗೂ ಸದಾಶಿವ ಆಚಾರ್ಯ, ಸವಿತಾ, ಜಲಜಾಕ್ಷಿ, ಶರ್ಮಿಳಾ ದಿಲೀಪ್ ಕುಮಾರ್, ಉಮಾವತಿ ಶೆಣೈ , ರಾಜೇಶ್ವರಿ ಭಟ್,ಸುಮನಾ ಬಾಲಕೃಷ್ಣರಾವ್ ಮತ್ತಿತರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯದರ್ಶಿಯವರಾದ ನಿರ್ಮಲ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ್ ಮಾಸ್ಟರ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಉಷಾ ಶೆಟ್ಟಿ ದೇವಿ ನಗರ ಧನ್ಯವಾದವಿತ್ತರು.





