ಕಲ್ಲಡ್ಕ : ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವತಿಯಿಂದ ನಡೆಸಿದ 2026ನೇ ಸಾಲಿನ ಭರತನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ತಾಲೂಕು ಗೋಳ್ತಮಜಲಿನ ನಿಶ್ಮ ಎ ಪಿ ಅವರು 92.25% ಅಂಕಗಳೊಂದಿಗೆ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿರುತ್ತಾರೆ.

ಗೋಳ್ತಮಜಲ್ ಅಶೋಕ್ ಮತ್ತು ಜ್ಯೋತಿ ಇವರ ಪುತ್ರಿಯಾಗಿರುವ ಈಕೆ ಪ್ರಸ್ತುತ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ಪುತ್ತೂರು ಇಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ (ರಿ) ಪುತ್ತೂರು ಇದರ ಸಹ ಸಂಸ್ಥೆಯಾದ ನೃತ್ಯ ಕಲ್ಪ ಎರ್ಮೆ ಮಜಲ್ ಇಲ್ಲಿನ ನೃತ್ಯ ಗುರುಗಳಾದ ವಿದುಷಿ ಚೈತ್ರ ಪ್ರಜ್ವಲ್ ಶೆಟ್ಟಿ ಮಂಗಳೂರು ಇವರ ಶಿಷ್ಯೆ.






