
ಬಂಟ್ವಾಳ: ಪಾಣೆಮಂಗಳೂರು-ಮೆಲ್ಕಾರ್ನ ಪ್ರಸಿದ್ಧ ‘ಸ್ವರಾಜ್ ಸ್ಟುಡಿಯೋ’ ಮಾಲಕ ರಾಜರತ್ನ ಅವರ ಪುತ್ರಿ ನೇಹಾ (29) ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾದರು.

ಕಳೆದ ಒಂದು ವರ್ಷದಿಂದ ತಲೆಗೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.






