ಬಂಟ್ವಾಳ : ಶ್ರೀ ವೀರೇಂದ್ರ ಹೆಗ್ಗಡೆ ಯವರ 78 ನೇ ಜನ್ಮದಿನದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನ ಕಚೇರಿ ವ್ಯಾಪ್ತಿಯ, ತುಂಬೆ ವಲಯದ ವತಿಯಿಂದ ಜನಜಾಗೃತಿ ವೇದಿಕೆ,ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರು, ನವ ಜೀವನ ಸಮಿತಿ ಸದಸ್ಯರು, ವೀರೇಂದ್ರ ಹೆಗ್ಗಡೆ ಅಭಿಮಾನಿಗಳ ಬಳಗದಿಂದ

ಬಂಟ್ವಾಳ ತಾಲೂಕು ನೆತ್ತರಕೆರೆ ಶ್ರಾವ್ಯ ಗೋಕುಲ ಗೋ ಮಂದಿರದಲ್ಲಿ ಗೋಪೂಜೆ ನೆರವೇರಿಸಿ, ಮೇವು ಹಾಗೂ ಹಸಿರು ಹುಲ್ಲು ವಿತರಣೆ ಮಾಡುವ ಮೂಲಕ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯ ಬಾಸ್ಕರ್ ಚೌಟ, ಗೋಶಾಲೆಯ ಪ್ರಮುಖ ನಾರಾಯಣ ಹೊಳ್ಳ, ಐತಪ್ಪ ಅಳ್ವ ಸುಜೀರ್ ಗುತ್ತು, ಪದ್ಮನಾಭ ಗೋವಿನ ತೋಟ, ಯೋಜನೆಯ ತಾಲೂಕು ಯೋಜನಾಧಿಕಾರಿ ಜಯನಂದ ಪಿ, ತುಂಬೆ ವಲಯ ಮೇಲ್ವಿಚಾರಕ್ಕೆ ಮಮತಾ, ಒಕ್ಕೂಟಗಳ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.






