Bantwal :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ.(ರಿ.) ಹನ್ನೆರಡುಕವಲು ವತಿಯಿಂದ 40 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 14 ರಂದು ಶ್ರೀ ಗಣೇಶ ಸಭಾಭವನ ಹನ್ನೆರಡುಕವಲಿನಲ್ಲಿ ನಡೆಯಲಿದೆ.

ಬೆಳಗ್ಗೆ ಗಂಟೆ 8:00 ಕ್ಕೆ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠೆ, ನಂತರ 40 ನೇ ವರ್ಷದ ಆಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಪೂಂಜ ದೇವಸ್ಥಾನದ ಶ್ರೀ ಕೃಷ್ಣ ಪ್ರಸಾದ್ ಅಸ್ರಣ್ಣ ಅವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ 108 ತೆಂಗಿನಕಾಯಿ ಗಣಯಾಗ ನೆರವೇರಲಿದೆ.


ಬೆಳಗ್ಗೆ ಗಂಟೆ 10:30 ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12:00 ಕ್ಕೆ ಮಹಾಪೂಜೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 1:00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಗಂಟೆ 5:00 ಕ್ಕೆ ಹನ್ನೆರಡುಕವಲು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಸಂಜೆ ಗಂಟೆ 5:30 ರಿಂದ ಭವ್ಯ ಶೋಭಾಯಾತ್ರೆ, ವಿಗ್ರಹ ವಿಸರ್ಜನೆ ನಡೆಯಲಿದೆ.






