ಉಜಿರೆ: ಮಂಗಳೂರು, ಉಡುಪಿ, ಮೂಡುಬಿದಿರೆ, ಕಾರ್ಕಳ ಹಾಗೂ ಕುಂದಾಪುರದಲ್ಲಿ ತನ್ನ ವಿಶಿಷ್ಟ ಸಂಗ್ರಹಗಳಿಂದ ಸೈ ಎನಿಸಿಕೊಂಡಿರುವ ಪ್ರಸಿದ್ಧ ‘ಮಲ್ಹಾರ್ ಎಕ್ಸಿಬಿಷನ್ಸ್’ (Malhar Exhibitions) ಇದೀಗ ಬೆಳ್ತಂಗಡಿ ತಾಲೂಕಿನ ಉಜಿರೆಗೆ ಆಗಮಿಸುತ್ತಿದೆ.

ಶಾಪಿಂಗ್ ಪ್ರಿಯರಿಗಾಗಿ ವಿಶೇಷವಾಗಿ ರೂಪಿಸಲಾದ ಈ ಬೃಹತ್ ಬಟ್ಟೆ ಮತ್ತು ಆಭರಣಗಳ ಪ್ರದರ್ಶನವು ಆಗಸ್ಟ್. 15 ಶನಿವಾರ & ಆಗಸ್ಟ್ 16 ಆದಿತ್ಯವಾರದಂದು ಉಜಿರೆಯ ‘ಓಷನ್ ಪರ್ಲ್’ (Ocean Pearl) ಸಭಾಂಗಣದಲ್ಲಿ ನಡೆಯಲಿದೆ. ಕೇವಲ ಎರಡು ದಿನಗಳ ಕಾಲ ಮಾತ್ರ ಸಾರ್ವಜನಿಕರಿಗೆ ಲಭ್ಯವಿರಲಿರುವ ಈ ಎಕ್ಸಿಬಿಷನ್, ಒಂದೇ ಸೂರಿನಡಿ ದೇಶದ ಪ್ರಸಿದ್ಧ ಬ್ರ್ಯಾಂಡ್ಗಳನ್ನು ತಲುಪಿಸಲಿದೆ.
ಮೇಳದ ಪ್ರಮುಖ ಆಕರ್ಷಣೆಗಳು:
- ಬ್ರಾಂಡೆಡ್ ಸೀರೆಗಳು, ಸಲ್ವಾರ್ಗಳು ಹಾಗೂ ಕುರ್ತೀಸ್
- ಮಕ್ಕಳ ಮತ್ತು ಪುರುಷರ ಉಡುಪುಗಳು
- ಕೊರಿಯನ್ ಆಭರಣಗಳು, ಆಂಟಿಕ್ ಆಭರಣಗಳು ಹಾಗೂ 1 ಗ್ರಾಂ ಆಭರಣಗಳು
- ಆಕರ್ಷಕ ಬ್ಯಾಗ್ಗಳು ಮತ್ತು ಬೆಡ್ಶೀಟ್ಗಳು
- ವಿವಿಧ ಬಗೆಯ ರುಚಿಕರ ಹಾಗೂ ಆಕರ್ಷಕ ತಿಂಡಿ ತಿನಿಸುಗಳು

ವೈವಿಧ್ಯಮಯ ಉಡುಪುಗಳ ಶ್ರೇಣಿ: ಹಬ್ಬ ಹಾಗೂ ವಿಶೇಷ ಸಮಾರಂಭಗಳಿಗೆ ಒಪ್ಪುವಂತಹ ಆಕರ್ಷಕ ಡಿಸೈನರ್ ಸೀರೆಗಳು, ನವನವೀನ ಮಾದರಿಯ ಸಲ್ವಾರ್ಗಳು ಮತ್ತು ಟ್ರೆಂಡಿ ಪಾರ್ಟಿ ವೇರ್ ಉಡುಪುಗಳು.

ನೂತನ ಜ್ಯುವೆಲ್ಲರಿ ಸಂಗ್ರಹ: ಪ್ರತಿಯೊಂದು ಉಡುಪಿಗೂ ಹಾಗೂ ಪ್ರತಿಯೊಂದು ಸನ್ನಿವೇಶಕ್ಕೂ ಮ್ಯಾಚ್ ಆಗುವಂತಹ ವೆರೈಟಿ ಆಭರಣಗಳು ಮತ್ತು ಆಧುನಿಕ ವಿನ್ಯಾಸದ ಜ್ಯುವೆಲ್ಲರಿ ಆಕರ್ಷಣೆ.

15 ರಿಂದ 20 ಬ್ರ್ಯಾಂಡೆಡ್ ಮಳಿಗೆಗಳು: ದೇಶದ ಬೇರೆ ಬೇರೆ ಮೂಲೆಗಳ ಪ್ರಸಿದ್ಧ ಬ್ರ್ಯಾಂಡ್ಗಳು ಒಂದೇ ವೇದಿಕೆಯಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಒದಗಿಸಲಿವೆ.
ವಿಶೇಷ ಕೊಡುಗೆ: ನಿಮ್ಮ ಹಳೆಯ ರೇಷ್ಮೆ ಸೀರೆಗಳಿಗೆ ಸ್ಥಳದಲ್ಲೇ ಸೂಕ್ತ ಬೆಲೆ ನೀಡಿ (ಹಣ ಕೊಟ್ಟು) ಖರೀದಿಸಲಾಗುತ್ತದೆ. ಜೊತೆಗೆ ಪ್ರಸಿದ್ಧ ಗಿಡ ಮೂಲಿಕೆಗಳ ಔಷಧ ಭಂಡಾರ ಮಳಿಗೆಯೂ ಈ ಪ್ರದರ್ಶನದಲ್ಲಿರಲಿದೆ.
ಫ್ಯಾಷನ್ ಪ್ರಿಯರು ಹಾಗೂ ಸಾರ್ವಜನಿಕರು ಈ ಉಚಿತ ಪ್ರವೇಶವಿರುವ ಬೃಹತ್ ಫ್ಯಾಷನ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕಾಗಿ ಆಯೋಜಕರು ಕೋರಿದ್ದಾರೆ.







