ಉಜಿರೆ: ಎಸ್ ಡಿ ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಅಂಗವಾಗಿ ಸೇವೆ ಸಲ್ಲಿಸುತ್ತಿರುವ ಸ್ವಯಂಸೇವಕರಿಗೆ ಕ್ಯಾಪ್ಗಳನ್ನು ಮತ್ತು ಭಕ್ತಾದಿಗಳಿಗೆ ಪ್ರಸಾದ ನೀಡುವ ಬ್ಯಾಗನ್ನು ನೀಡಲಾಯಿತು.

ಈ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿರುವುದರಿಂದ, ಕಾರ್ಯಕ್ರಮದ ಯಶಸ್ಸಿಗೆ ಸ್ವಯಂಸೇವಕರ ಸೇವೆ ಮಹತ್ವದ್ದಾಗಿದೆ. ಅವರ ಶ್ರಮ ಮತ್ತು ಸಮರ್ಪಣೆಯನ್ನು ಗೌರವಿಸುವ ಉದ್ದೇಶದಿಂದ ಹಾಗೂ ಭಕ್ತರ ಮೇಲಿನ ಕಾಳಜಿಯಿಂದ ಆಸ್ಪತ್ರೆಯ ಆಡಳಿತ ಮಂಡಳಿ ಈ ಕ್ರಮವನ್ನು ಕೈಗೊಂಡಿದೆ.

ಪರಮಪೂಜ್ಯ ಡಾ ಡಿ ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ಅಮ್ಮನವರ ಆಶೀರ್ವಾದದಿಂದ ಹಾಗೂ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಅಪೂರ್ವ ಕೊಡುಗೆಯನ್ನು ನೀಡಲಾಗಿದೆ. ಅಂತೆಯೇ ಈ ಸೇವೆಯನ್ನು ಅನುಷ್ಠಾನ ತರುವುದಕ್ಕೆ ಕಾರಣರಾದವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ದನ ಅವರು.
ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸದಾ ಬೆಂಬಲ ನೀಡುವುದು ಎಸ್ ಡಿ ಎಂ ಸಂಸ್ಥೆಯ ಧ್ಯೇಯವಾಗಿದೆ.

ಅಂದಹಾಗೆ ಕ್ಯಾಪ್ಗಳು ಮತ್ತು ಭಕ್ತಾದಿಗಳಿಗೆ ಪ್ರಸಾದ ನೀಡುವ ಬ್ಯಾಗ್ ಜತೆಗೆ ಬ್ರಹ್ಮ ಕಲಶೋತ್ಸವದಲ್ಲಿ ಉಚಿತವಾಗಿ ಆರೋಗ್ಯ ಸೇವೆಯನ್ನು ನೀಡಲಾಗುತ್ತಿದೆ.






