ಉಜಿರೆ :”ಸಂಸ್ಕೃತವನ್ನು ಕಲಿತು ಸುಸಂಸ್ಕೃತರಾಗಿ, ಆಧುನಿಕ ಮೋಹಕೊಳಗಾಗಿ ಸಂಸ್ಕೃತವನ್ನು ನಿರ್ಲಕ್ಷಿಸದೆ ಅಧ್ಯಯನ ಮಾಡಿ.



ಸಂಸ್ಕೃತವನ್ನು ಮಾತಾಡುವ, ಸಂಸ್ಕೃತವನ್ನು ಇಡುವ, ಸಂಸ್ಕೃತವನ್ನು ರಕ್ಷಿಸುವ ಹಾಗೂ ವರ್ಧಿಸುವ” ಎಂದು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ) ಸಂಸ್ಕೃತ ಅಧ್ಯಾಪಕರಾದ ಶ್ರೀ ಹರೀಶ್ ಕುಮಾರ್.ಎಂ ಇವರು ಹೇಳಿದರು.
ಇವರು ಆ.28 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ,(ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ‘ಆತ್ಮಾನಂ ಸಂಸ್ಕೃತಂ ಮನ್ಯೆ’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಸಂಸ್ಕೃತ ಜಯ ಘೋಷಣೆಗಳ ಮೆರವಣಿಗೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪಂಚಾಂಗ ವಾಚನ, ಸುಭಾಷಿತ, ಸಮೂಹ ಗಾಯನ ಹಾಗೂ ವಿಶ್ವ ಸಂಸ್ಕೃತ ದಿನದ ಮಹತ್ವದ ಕುರಿತು ಭಾಷಣ ಆಯೋಜಿಸಲಾಗಿತ್ತು.
ಶಾಲಾ ಪ್ರಾಂಶುಪಾಲರು ಶ್ರೀ ಮನಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವಿದ್ಯಾರ್ಥಿ ಸಿದ್ಧಾಂತ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಜನಾ ವಾಲ್ತಾಜೆ ಸ್ವಾಗತಿಸಿ, ವಿದ್ಯಾರ್ಥಿ ಅತುಲ್ಯ ತೇಜ ವಂದಿಸಿದರು.





