ಉಡುಪಿ: ಬ್ರಹ್ಮಾವರದ ಗಾಂಧಿನಗರದಲ್ಲಿ ನೆನ್ನೆ ತಡರಾತ್ರಿ ಧೃತಿಗೆಡಿಸುವ ಬರ್ಬರ ಕೃತ್ಯವೊಂದು ಸಂಭವಿಸಿದೆ.

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ವಿಕೋಪಕ್ಕೆ ತಿರುಗಿ, 31 ವರ್ಷದ ಶಾಹಿದ್ ಆಲಿ ಎಂಬಾತ ತನ್ನ ಹೆತ್ತ ತಾಯಿ ಹಾಗೂ ತಂದೆಯನ್ನೇ ಸುತ್ತಿಗೆಯಿಂದ ಬರ್ಬರವಾಗಿ ಹೊಡೆದು ಹತ್ಯೆಗೈದಿದ್ದಾನೆ.

ಘಟನೆ ನಡೆದ ತಕ್ಷಣ ಸ್ಥಳಕ್ಕಾಗಮಿಸಿದ ಬ್ರಹ್ಮಾವರ ಠಾಣೆ ಪೊಲೀಸರು ಆರೋಪಿ ಶಾಹಿದ್ ಆಲಿಯನ್ನು ವಶಕ್ಕೆ ಪಡೆದಿದ್ದಾರೆ.

ಕೊಲೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬರಬೇಕಿದ್ದು, ಉನ್ನತ ಮಟ್ಟದ ತನಿಖೆ ಮುಂದುವರಿದಿದೆ.







