ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ (ರಿ ) ಇದರ ವಿಶೇಷ ಸಭೆಯು ಸುಳ್ಯ ವಕೀಲರ ಭವನದಲ್ಲಿ ಜಿಲ್ಲಾ ಅಧ್ಯಕ್ಷರಾದ ರಿಚರ್ಡ್ ಡಿ ಕೊಸ್ತಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ವಕೀಲರ ಶ್ರೇಯೋಭಿವೃದ್ಧಿಗಾಗಿ ಸೊಸೈಟಿ ಯನ್ನು ರಚಿಸುವ ಬಗ್ಗೆ ಚರ್ಚಿಸಲಾಯಿತು. ವಕೀಲರ ಸಂಘಗಳ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.


ಇನ್ನು ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಮಂಗಳೂರು ನಿಕಟಪೂರ್ವ ಅಧ್ಯಕ್ಷರು ರಾಘವೇಂದ್ರ ಹೆಚ್ ವಿ, ಸುಳ್ಯ ಅಧ್ಯಕ್ಷರು ಸುಕುಮಾರ್ ಕುರ್ತುಕುಳಿ, ಮೂಡಬಿದ್ರೆ ನಿಕಟ ಪೂರ್ವ ಅಧ್ಯಕ್ಷರು ಹರೀಶ್, ಜಗನ್ನಾಥ ರೈ, ದಯಾನಂದ್,

ಬೆಳ್ತಂಗಡಿ ನಿಕಟಪೂರ್ವ ಕಾರ್ಯದರ್ಶಿ ದ ಕ ಜಿಲ್ಲಾ ಜೊತೆ ಕಾರ್ಯದರ್ಶಿ ನವೀನ್ ಬಿ ಕೆ, ಸದಸ್ಯರುಗಳಾದ ಮನೋಹರ್ ಕುಮಾರ್ ಎ, ಶ್ರೀನಿವಾಸ ಗೌಡ ಬೆಳಾಲು, ನರೇಂದ್ರ ಬಂಟ್ವಾಳ, ಕಾರ್ಯದರ್ಶಿ ಜಯಪ್ರಕಾಶ್ ಉಪಸ್ಥಿತರಿದ್ದರು.





