ಈಶ್ವರಮಂಗಲ: ಶ್ರೀ ಅಯ್ಯಪ್ಪ ಶಾರದಾಂಬ ಭಜನಾ ಮಂದಿರ ಬೆಳ್ಳಿಚಡವು ಈಶ್ವರಮಂಗಲ, ಇಲ್ಲಿ ಶ್ರೀ ಶಿವ ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ ಬೆಳ್ಳಿಚಡವು ಇದರ ವತಿಯಿಂದ ಮಾಸಿಕ ತಾಳಮದ್ದಳೆಯು


ನಾಧ್ಯಾಕೃಷ್ಣಪ್ರಸಾದ್ ಇವರ ಸೇವಾರೂಪವಾಗಿ ” ಪಾರ್ಥ ಸಾರಥ್ಯ” ಎಂಬ ಆಖ್ಯಾನದೊಂದಿಗೆ ದಿನಾಂಕ 22.08.2026 ನೆಯ ಶನಿವಾರದಂದು ಅತಿ ವಿಜ್ರಂಭಣೆಯಿಂದ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಮೋಹನ ಮೆಣಸಿನಕಾನ ಕುಮಾರಿ ಅಂಜನಾ ಜಯರಾಜ್ ಕುಮಾರಿ ಅನನ್ಯಾ ಜಯರಾಜ್ ಮತ್ತು ಕುಮಾರಿ ನಾಧ್ಯಕೃಷ್ಣ, ಚೆಂಡೆ ಮದ್ದಳೆಯಲ್ಲಿ ಶ್ರೀ ನಾರಾಯಣ ಪಾಟಾಳಿ ಮಯ್ಯಾಳ ಮತ್ತು ಮಾಸ್ಟರ್ ಆಯುಷ್ ಪುತ್ತೂರು ಇವರು ಸಹಕರಿಸಿದರು.

ಅರ್ಥಧಾರಿಗಳಾಗಿ ಶ್ರೀ ಮಾಧವ ರಾವ್ ಕುಂಟಾರು, ಶ್ರೀ ಪ್ರಭಾಕರ ಆಚಾರ್ಯ ಹಿರಿಯಾನ ಶ್ರೀ ಪದ್ಮನಾಭ ಕೃಷ್ಣ ಸಿಂಧೂರ ಸಹಕರಿಸಿದರು.ಆರಂಭದಲ್ಲಿ ಶ್ರೀ ಪದ್ಮನಾಭ ಮಯ್ಯಾಳ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ಜಯರಾಜ್ ದುಗ್ಗಲಡ್ಕ ಇವರು ಧನ್ಯವಾದ ಸಮರ್ಪಿಸಿದರು.






