ಈಶ್ವರಮಂಗಲ: ಈಶ್ವರಮಂಗಲದಲ್ಲಿ ಗಾಣಿಗ ಸಮಾಜ ಸೇವಾ ಸಂಘದ ಆಟಿಯಲ್ಲೊಂದು ದಿನ ಕಾರ್ಯಕ್ರಮ ಜರುಗಿತು.



ವಿಶೇಷ ಕಾರ್ಯಕ್ರಮವಾಗಿ ಬಣ್ಣದ ಮಾಲಿಂಗ ಸ್ಮೃತಿಯಾನ ಕಾರ್ಯಕ್ರಮ ನಡೆಯಿತು. ಅದರ ಅಂಗವಾಗಿ ಶ್ರೀ ಶಿವ ಪಂಚಾಕ್ಷರಿ ಯಕ್ಷ ಪ್ರತಿಷ್ಠಾನಂ ಬೆಳ್ಳಿಚಡವು, ಈಶ್ವರಮಂಗಲ ಇದರ ವತಿಯಿಂದ ಯಕ್ಷ ಗಾನ ನಾಟ್ಯ ವೈಭವ ಅತೀ ಸುಂದರವಾಗಿ ಮೂಡಿಬಂತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ರವಿಕೃಷ್ಣ ದಂಬೆ, ಶ್ರೀ ಸುರೇಶ್ ಕುಳದಪಾರೆ , ಶ್ರೀ ಮೋಹನ ಮೆಣಸಿನಕಾನ, ಕುಮಾರಿಯರಾದ ನಾಧ್ಯಕೃಷ್ಣ ಹಾಗೂ ಪೂಜಾಶ್ರೀ ಸಹಕರಿಸಿದರು.

ಚೆಂಡೆ ಮದ್ದಳೆಯಲ್ಲಿ ಶ್ರೀ ಶಿವಶಂಕರ ಭಟ್ ಅಂಬೆಮೂಲೆ, ಶ್ರೀ ಪ್ರಮೋದ್ ಕುಮಾರ್ ಮತ್ತು ಶ್ರೀ ಸದಾನಂದ ಮಯ್ಯಾಳ ಹಾಗೂ ಚಕ್ರತಾಳದಲ್ಲಿ ಶ್ರೀ ಸುಂದರ ನಾಯ್ಕ ಪಾಣಾಜೆ ಸಹಕರಿಸಿದರು.

ಪಾತ್ರಧಾರಿಗಳಾಗಿ ಕುಮಾರಿಯರಾದ ಕವನ ಅಡೂರು, ಅಂಜನಾ ಜಯರಾಜ್, ಶ್ರೇಯಾ ಬೆಂಗಮಲೆ, ಅನನ್ಯಾ ಜಯರಾಜ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ಶ್ರೀ ಅಚ್ಯುತ ಮಾಸ್ಟರ್ ಈಶ್ವರಮಂಗಲ ಅವರು ಎಲ್ಲರನ್ನೂ ಪ್ರೀತಿಪೂರ್ವಕ ಸ್ವಾಗತಿಸಿದರು. ಶ್ರೀಮತಿ ಶೈಲಜಾ ಜಯರಾಜ್ ಅವರು ವಂದಿಸಿದರು.






