ಬೆಂಗಳೂರು: ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ನ್ಯೂಸ್ 18 ಕನ್ನಡದ ಪ್ರತಿಷ್ಠಿತ ‘ಈ ವರ್ಷದ ಕನ್ನಡಿಗ 2026’ ಪ್ರಶಸ್ತಿ ಪ್ರದಾನ ಸಮಾರಂಭವು ರಾಜಧಾನಿಯಲ್ಲಿ ಅದ್ಧೂರಿಯಾಗಿ ಜರುಗಿತು.

ಈ ಬಾರಿಯ ಕೃಷಿ ವಿಭಾಗದ ಪ್ರಶಸ್ತಿಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಗತಿಪರ ಸಾವಯವ ಕೃಷಿಕ ಕಡಮ್ಮಾಜೆ ದೇವಿಪ್ರಸಾದ್ ಕೆ. ಗೌಡ ಅವರಿಗೆ ಸಂದಿದೆ.


ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ‘ಕಡಮ್ಮಾಜೆ ಫಾರ್ಮ್ಸ್’ ಮೂಲಕ ಕೃಷಿಯಲ್ಲಿ ಹೊಸ ಕ್ರಾಂತಿ ಮಾಡಿರುವ ದೇವಿಪ್ರಸಾದ್ ಗೌಡರು, ಸಾಂಪ್ರದಾಯಿಕ ಕೃಷಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡವರು.

ವಿಷಮುಕ್ತ ಆಹಾರ ಬೆಳೆಯುವ ಉದ್ದೇಶದಿಂದ ಸಂಪೂರ್ಣವಾಗಿ ಸಾವಯವ ಕೃಷಿ (Organic Farming) ಪದ್ಧತಿಯನ್ನು ಅಳವಡಿಸಿಕೊಂಡು ನೂರಾರು ರೈತರಿಗೆ ಮಾದರಿಯಾಗಿದ್ದಾರೆ.








