ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ನಿವಾಸಕ್ಕೆ ಇಂದು ವಿಶೇಷ ಅತಿಥಿಗಳ ಆಗಮನವಾಗಿತ್ತು. ಗೋಕರ್ಣ ಶ್ರೀ ಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಶಾಸಕರ ಮನೆಗೆ ಭೇಟಿ ನೀಡಿ ಆಶೀರ್ವದಿಸಿದರು.

ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಶಾಸಕರ ಮನೆಗೆ ಆಗಮಿಸಿದಾಗ, ಭವ್ಯ ಸ್ವಾಗತ ಕೋರಲಾಯಿತು.

ಶಾಸಕ ಹರೀಶ್ ಪೂಂಜ ಮತ್ತು ಅವರ ಕುಟುಂಬದವರು ಶ್ರೀಗಳ ಪಾದಪೂಜೆ ನೆರವೇರಿಸಿ, ಫಲಪುಷ್ಪಗಳನ್ನು ಅರ್ಪಿಸಿ ಗುರುಗಳ ಆಶೀರ್ವಾದ ಪಡೆದರು.

ಈ ಭೇಟಿಯ ಸಮಯದಲ್ಲಿ ಮಠದ ಅನುಯಾಯಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.









