ಬೆಳ್ತಂಗಡಿ: ಕಳೆದ ಕೆಲವು ಗಂಟೆಗಳಿಂದ ಸುರಿಯುತ್ತಿರುವ ಆಕಸ್ಮಿಕ ಭಾರೀ ಮಳೆಗೆ ಗಾಳಿಯ ವೇಗ ಹೆಚ್ಚಾದ ಹಿನ್ನಲೆಯಲ್ಲಿ,

ಬೆಳ್ತಂಗಡಿ ಪಟ್ಟಣದ ಪ್ರಮುಖ ಕೇಂದ್ರವಾದ ಸಂತೆಕಟ್ಟೆಯ ರಿಕ್ಷಾ ಸ್ಟ್ಯಾಂಡ್ನ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಮೇಲ್ಛಾವಣಿ ಕುಸಿದ ಸಮಯದಲ್ಲಿ ನಿಲ್ದಾಣದಲ್ಲಿ ಪಾರ್ಕ್ ಮಾಡಲಾಗಿದ್ದ ರಿಕ್ಷಾಗಳ ಮೇಲೆ ಶೀಟ್ ಬಿದ್ದ ಪರಿಣಾಮ ರಿಕ್ಷಾ ಜಖಂಗೊಂಡಿವೆ. ಗಾಳಿ ಮಳೆ ಜೋರಾಗಿದ್ದರಿಂದ ಚಾಲಕರು ಮತ್ತು ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿದ್ದರು ಎನ್ನಲಾಗಿದೆ, ಇದರಿಂದಾಗಿ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ.








