ಬೆಳ್ತಂಗಡಿ: ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ, ಬೆಳ್ತಂಗಡಿ ಪಿಎಂಶ್ರೀ ಮಾದರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಗೇರುಕಟ್ಟೆ ಇಂಚರ ನಿವಾಸಿ ಅಖಿಲ್ ಕುಮಾರ್ (49ವ) ಅವರು ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜೂ.12ರಂದು ನಿಧನರಾದರು.


ಓರ್ವ ಅದ್ಭುತ ಕಬಡ್ಡಿ ತೀರ್ಪುಗಾರರಾಗಿ, ತರಬೇತಿದಾರರಾಗಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ದೈಹಿಕ ಶಿಕ್ಷಕರಾಗಿ ಹೆಸರು ಗಳಿಸಿದ್ದರು. ರಾಜ್ಯ ಸರಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿಯಾಗಿ, ತಾಲೂಕಿನ ಗ್ರೇಡ್ – 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.


ಮೃತರು ಪತ್ನಿ ಶಿಕ್ಷಕಿ ಜ್ಯೋತಿ ಅಖಿಲ್ ಕುಮಾರ್, ಮಕ್ಕಳಾದ ಓರ್ವ ಪುತ್ರಿ, ಓರ್ವ ಪುತ್ರ, ಸಹೋದರ ಅಮರ್, ಸಹೋದರಿ ಅನಿತಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.







