ಉಜಿರೆ: ನ.28 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಭಕ್ತ ಕವಿ, ತತ್ತ್ವಜ್ಞಾನಿ ಹಾಗೂ ದಾಸ ಪರಂಪರೆಯ ಮಹಾನ್ ವ್ಯಕ್ತಿತ್ವರಾದ ಶ್ರೀ ಕನಕದಾಸರ ಜಯಂತಿ ಭಾವಪೂರ್ಣವಾಗಿ ಆಚರಿಸಲಾಯಿತು.

“ಕನಕ ಸೌರಭ” ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಯನ್ನು 7ನೇ ತರಗತಿ ವಿದ್ಯಾರ್ಥಿ ಸುಶ್ರುತ್ ಪಾತ್ರಾಭಿನಯದ ಮೂಲಕ ಪ್ರಸ್ತುತಿ, 7ನೇ ತರಗತಿ ವಿದ್ಯಾರ್ಥಿನಿ ನಮಸ್ವಿಯಿಂದ ಕನಕದಾಸರ ಕೀರ್ತನೆ ಗಾಯನ, 6,7 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಂದ ಗುಂಪು ಗಾಯನ ಹಾಗೂ 8ನೇ ತರಗತಿ ವಿದ್ಯಾರ್ಥಿನಿಯರಿಂದ ಕುಣಿತ ಭಜನೆ ಆಯೋಜಿಸಲಾಗಿತ್ತು.


ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ. ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ದೀಪ ಪ್ರಜ್ವಲಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು.
7ನೇ ತರಗತಿ ವಿದ್ಯಾರ್ಥಿನಿ ಆದ್ಯ ಕಾರ್ಯಕ್ರಮ ನಿರೂಪಿಸಿದರು.





