ಪ್ರೀತಿಯ ಕಲಾಬಿಮಾನಿ ಬಂಧುಗಳೇ.. ಮನದೊಳಗಿನ ಮಾತು ಹೊರಬರುವುದು ಮನ ಮುಟ್ಟುವ ಕಲಾವಿದನ ನೋಡಿದಾಗ, ಮಾತಿನ ಚತುರತೆ ಅಭಿನಯ ಹಾಸ್ಯ ಇದೆಲ್ಲವೂ ಕೂಡ ಒಂದುಗೂಡಿ ಒಬ್ಬ ಕಲಾವಿದನಲ್ಲಿ ಕಂಡು ಬಂದಾಗ ಮನದೊಳಗಿನ ಮಾತು ಪದವಾಗಿ ಹೊರಬರಲು ಸಮಯ ಬೇಡ ಅಲ್ಲವೇ…

ನಾನು ಇವತ್ತು ಮಾತನಾಡಲು ಅಂದರೆ ಬರೆಯಲು ಹೊರಟ ಕಲಾವಿದ ತುಳುನಾಡ ತುಡರ್ ಎಂದೇ ಪ್ರಖ್ಯಾತಿ ಪಡೆದು ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ದೇಶ ವಿದೇಶದಲ್ಲಿ ತಮ್ಮ ಹೆಸರನ್ನು ತಮಗೆ ಅರಿವಿಲ್ಲದೆ ಪ್ರಸಿದ್ದಿ ಪಡೆದ ಒಬ್ಬ ಶ್ರೇಷ್ಠ ಕಲಾವಿದ….
ಇವರು ಮೂಲತಃ ಕಾರ್ಕಳದವರು ನಾಟಕ ಕಿರುಚಿತ್ರ ಧಾರಾವಾಹಿ ಸಿನಿಮಾ ಸ್ಟ್ಯಾಂಡಪ್ ಕಾಮಿಡಿ ಪ್ರಾಂಕ್ ಕಾಲ್ ಹೀಗೆ ಹಲವಾರು ರೀತಿಯ ಪಾತ್ರದಲ್ಲಿ ಕಾಣಸಿಗುವ ಕೀರ್ತಿ ಕಾರ್ಕಳ ಬರೇ ಕಲಾವಿದನಾಗಿ ಮಾತ್ರ ಇರದೆ ಉತ್ತಮ ಸಮಾಜ ಸೇವಕರು ಕೂಡ ಹೌದು. ಹೊಸ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಒದಗಿಸಿ ಕೊಡೊ ಕಲಾ ಸ್ನೇಹಿಯು ಹೌದು..
ಕಲೆಯನ್ನು ಪೂಜಿಸೋ ಪ್ರತಿ ಕಲಾವಿದ ಕೂಡ ತನ್ನ ಬಳಿಕವು ಹೆಸರು ಉಳಿಸೋ ಕಲಾ ಸೇವೆ ಮಾಡುತ್ತಾನೆ ಇದು ಸತ್ಯವಾದ ಮಾತು… ಕೀರ್ತಿ ಕಾರ್ಕಳ ಹಾಗೆ ತುಳುನಾಡ ತುಡರ್ ಬಿರುದು ಪಡೆದುಕೊಳ್ಳಲಿಲ್ಲ ಶ್ರಮ ಮತ್ತು ಪ್ರಯತ್ನ ಅವರ ಬಿರುದಿನ ಹಿಂದಿರುವ ಸಾಧನೆಗೆ ಕಾರಣ…

ನಮ್ಮ ತುಳುನಾಡ್ ಟ್ರಸ್ಟ್ ಇದರ ರಾಜ್ಯ ಸಂಚಾಲಕರಾಗಿ ಗುರುತಿಸಿಕೊಂಡ ಕೀರ್ತಿಯು ಇವರದ್ದಾಗಿದೆ..
ಒಬ್ಬ ಕಲಾವಿದ ಯಾವತ್ತೂ ಕೂಡ ಕಲಾವಿದನೆ ಅನ್ನೋದು ಕೀರ್ತಿ ಕಾರ್ಕಳ ತೋರಿಸಿಕೊಟ್ಟಿದ್ದಾರೆ..
ಕೀರ್ತಿ ಕಾರ್ಕಳ ಸಿಕ್ಕ ಅವಕಾಶಕ್ಕೆ ಎಂದು ಕೊರತೆಯಾಗದ ರೀತಿಯಲ್ಲಿ ಜೀವ ತುಂಬಿದ್ದಾರೆ
ಕೀರ್ತಿ ಕಾರ್ಕಳ ಇನ್ನಷ್ಟು ಬೆಳವಣಿಗೆ ಕಾಣಬೇಕು ಅನ್ನೋದು ನನ್ನ ಅನಿಸಿಕೆ….
ಬರಹ:
ವಿನೋದ್ ಕುಂಪಲ (ಆರ್ ಜೆ ಮುನ್ನ )










