ಕಾಸರಗೋಡು: ಕೇರಳ ರಾಜಕಾರಣದ ಅತ್ಯಂತ ಕುತೂಹಲಕಾರಿ ಮತ್ತು “ಹಾಟ್ ಸೀಟ್” ಎಂದೇ ಬಿಂಬಿತವಾಗಿರುವ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಹೇಗಾದರೂ ಮಾಡಿ ವಿಜಯ ಪತಾಕೆ ಹಾರಿಸಲು ಬಿಜೆಪಿ ಸರ್ವ ಸನ್ನದ್ಧವಾಗಿದೆ. ಪ್ರತಿ ಚುನಾವಣೆಯಲ್ಲೂ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಕೈತಪ್ಪುತ್ತಿರುವ ಇತಿಹಾಸವನ್ನು ಅಳಿಸಿ ಹಾಕಲು ಈ ಬಾರಿ ಕೇಸರಿ ಪಡೆ ಹಗಲಿರುಳು ಶ್ರಮಿಸುತ್ತಿದೆ.

ಮಂಜೇಶ್ವರದ ಬಿಜೆಪಿ ಅಭ್ಯರ್ಥಿ ಶ್ರೀ ಕೆ. ಸುರೇಂದ್ರನ್ ಅವರ ಪರವಾಗಿ ಇಂದು ಎಣ್ಮಕಜೆ ವ್ಯಾಪ್ತಿಯ ಕಂಡೇರಿ ಗ್ರಾಮ ಪಂಚಾಯತ್ನಲ್ಲಿ ಭರ್ಜರಿ ಪ್ರಚಾರ ನಡೆಯಿತು. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು. ತುಳು ಮತ್ತು ಕನ್ನಡ ಭಾಷಿಕರೇ ಅಧಿಕವಾಗಿರುವ ಈ ಭಾಗದಲ್ಲಿ ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಎಲ್ ಡಿ ಎಫ್ ಹಾಗೂ ಯುಡಿಎಫ್ ನ ಆಡಳಿತ ವೈಫಲ್ಯ ಕಾಸರಗೋಡಿನ ಜ್ವಲಂತ ಸಮಸ್ಯೆಗಳಿಂದ ಬೇಸತ್ತಿರುವ ಜೊತೆಗೆ ನವ ಕಾಸರಗೋಡಿನ ನಿರ್ಮಾಣಕ್ಕಾಗಿ ಕಾಸರಗೋಡಿನ ಜನತೆ ಬದಲಾವಣೆಯನ್ನು ಬಯಸಿದ್ದಾರೆ ಎಂದು ಈ ಸಂದರ್ಭ ದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಪದ್ಮನಾಭ ಭಟ್ ಕಂಡೇರಿ , ಪ್ರದೀಪ್ ಭಟ್ ಕಂಡೇರಿ, ಸಾತ್ವಿಕ್ ಕಂಡೇರಿ, ನಾಲ್ಕನೇ ವಾರ್ಡನ ಪಂಚಾಯತ್ ಸದಸ್ಯರಾದ ಪುಷ್ಪಾವತಿ ವಿ. ರೈ, ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸ್ವಸ್ತಿಕ್ ಕೆಂಗಣಾಜೆ , ಪ್ರಜ್ವಲ್ ಆರ್. ಕೆ ದಂಬೆಕಾನ, ವಿನೋದ್ ಕೊಲ್ಯ, ಪ್ರಶಾಂತ್ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.







