ಕಾಶಿಪಟ್ಣ: ದಿನಾಂಕ 1.6.2026 ನೇ ಸೋಮವಾರ ಸ.ಹಿ. ಪ್ರಾ.ಶಾಲೆ ಕಾಶಿಪಟ್ಣ ಇಲ್ಲಿ ಪ್ರಾರಂಭೋತ್ಸವ ಹಾಗೂ ಪೋಷಕ ಶಿಕ್ಷಕ ಮಹಾಸಭೆಯ ನಡೆಯಿತು. ಮೆರವಣಿಗೆಯೊಂದಿಗೆ ಹೊಸ ಮಕ್ಕಳನ್ನು ಸ್ವಾಗತಿಸಲಾಯಿತು. ಮಕ್ಕಳನ್ನು ಆಕರ್ಷಿಸಲು ಗೊಂಬೆ ಕುಣಿತ ವ್ಯವಸ್ಥೆಯನ್ನು ಮಾಡಲಾಗಿತ್ತು.




ಈ ದಿನ ಹಾಸ್ಕೋ ಟ್ರೇಡರ್ಸ್ ಮೂಡಬಿದ್ರೆ ಇದರ ಮಾಲಕರು ಹಾಗೂ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು ಆಗಿರುವ ಶ್ರೀಯುತ ಅಕ್ತರ್ ಅಹಮದ್ ಇವರು ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೆ ಪ್ರತಿ ವರ್ಷದಂತೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದರು.
ಅದೇ ರೀತಿ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಮಂಗಳೂರು ಇವರು ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಅತ್ಯುತ್ತಮ ದರ್ಜೆಯ ಶಾಲಾ ಬ್ಯಾಗ್ ಹಾಗೂ ಸ್ಟೇಷನರಿ ಐಟಂ ನೀಡಿ ಸಹಕರಿಸಿದರು. ಲ್ಯಾಂಡ್ ಟ್ರೇಡ್ಸ್ ಇದರ ಸ್ಥಾಪಕ ಅಧ್ಯಕ್ಷರಾಗಿರುವ ಶ್ರೀಯುತ ಕೆ. ಶ್ರೀನಾಥ್ ಹೆಬ್ಬಾರ್ ಇವರು ಸಭೆಯಲ್ಲಿ ಉಪಸ್ಥಿತರಿದ್ದು ಮುಂದೆಯೂ ಶಾಲಾ ಶೈಕ್ಷಣಿಕ ವ್ಯವಸ್ಥೆಗಳಿಗೆ ಸರ್ವ ರೀತಿಯ ಸಾಕಾರವನ್ನು ನೀಡುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಸರ್ವ ಸದಸ್ಯರುಗಳು ಕೂಡ ಭಾಗವಹಿಸಿದ್ದು ಕಾರ್ಯಕ್ರಮದ ಸಂಭ್ರಮವನ್ನು ಇಮ್ಮಡಿಗೋಳಿಸಿತು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ವಿದ್ಯಾನಂದ, ಉಪಾಧ್ಯಕ್ಷರಾದ ಶ್ರೀಮತಿ ಶಶಿಕಲಾ,ಲ್ಯಾಂಡ್ ಟ್ರೇಡ್ಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಯುತ ಕೆ.ಶ್ರೀನಾಥ್ ಹೆಬ್ಬಾರ್ , ಗ್ರಾಮ ಪಂಚಾಯಿತಿನ ನಿಕಟಪೂರ್ವ ಅಧ್ಯಕ್ಷರು, ಪೆರಾಡಿ ಬ್ಯಾಂಕಿನ ನಿರ್ದೇಶಕರು ಆಗಿರುವ, ನಮ್ಮ ಶಾಲೆ ಹಳವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾಗಿರುವ ಶ್ರೀಯುತ ಸತೀಶ್ ಕೆ, ಪಂಚಯತ್ ನ ನಿಕಟ ಪೂರ್ವ ಉಪಾಧ್ಯಕ್ಷರಾಗಿರುವ ಶ್ರೀಮತಿ ಶುಭವಿ, ಮಾತೆಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ, ಗರೋಡಿ ಫ್ರೆಂಡ್ಸ್ ಇದರ ಅಧ್ಯಕ್ಷರಾಗಿರುವಂತಹ ಶ್ರೀ ಮನೋಜ್, ಪೆರಾಡಿ ಬ್ಯಾಂಕಿನ ನಿರ್ದೇಶಕರಾಗಿರುವಂತಹ ಪ್ರವೀಣ್ ಪಿಂಟೋ , ಹಿರಿಯರಾದ ಶ್ರೀಯುತ ಕಾಂತಪ್ಪ ಪೂಜಾರಿ, ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದಂತಹ ಶುಭಕರ ಕೋಟ್ಯಾನ್ ಹಾಗೂ ಶ್ರೀ ಅಬ್ದುಲ್ ರಹಿಮಾನ್ ಹಾಗೂ ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಮುಖ್ಯ ಶಿಕ್ಷಕರಾದ ಶ್ರೀಯುತ ಸುರೇಂದ್ರ ಇವರು ಸಭೆಯಲ್ಲಿ ಉಪಸ್ಥಿತರಿದ್ದರು.
ಲ್ಯಾಂಡ್ ಟ್ರೇಡ್ಸ್ ಸಂಸ್ಥೆ ವತಿಯಿಂದ ಪೋಷಕರು ಹಾಗೂ ಮಕ್ಕಳೆಲ್ಲರಿಗೂ ಸಿಹಿ ತಿಂಡಿ ಹಾಗೂ ಜ್ಯೂಸ್ ವ್ಯವಸ್ಥೆಯನ್ನು ಮಾಡಲಾಯಿತು. ಶಿರ್ತಾಡಿ ಜಯಶ್ರೀ ಹೋಟೆಲ್ ಮಾಲಕರಾದ ಶ್ರೀಯುತ ಸುರೇಶ ಅಂಚನ್ ಅತಿಥಿಗಳ ಉಪಹಾರದ ವ್ಯವಸ್ಥೆಯನ್ನು ಒದಗಿಸಿಕೊಟ್ಟರು. ಶ್ರೀ ಕಾಂತಪ್ಪ ಪೂಜಾರಿ ಇವರು ಪಾಯಸದ ವ್ಯವಸ್ಥೆಯನ್ನು, ಎಸ್ ಡಿ ಎಂ ಸಿ ಸದಸ್ಯರಾದ ಶ್ರೀಮತಿ ಸವಿತಾ ಕೇಶವ ಇವರು ಲಡ್ಡು ವ್ಯವಸ್ಥೆಯನ್ನು ಹಾಗೂ ಪಿ.ಕೆ ರಾಜು ಪೂಜಾರಿ ಇವರು ಮಕ್ಕಳಿಗೆ ಚಾಕ್ಲೇಟ್ ಅನ್ನು ನೀಡಿ ಪ್ರೋತ್ಸಾಹಿಸಿದರು.




