ಧರ್ಮಸ್ಥಳ: ಪರಿಶ್ರಮ ಮತ್ತು ಸತತ ಪ್ರಯತ್ನವಿದ್ದರೆ ಸಾಧನೆ ಅಸಾಧ್ಯವಲ್ಲ ಎಂಬುದನ್ನು ಬೆಳ್ತಂಗಡಿಯ ವಿದ್ಯಾರ್ಥಿನಿಯೊಬ್ಬರು ಸಾಬೀತುಪಡಿಸಿದ್ದಾರೆ.



2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-2ರಲ್ಲಿ ಧರ್ಮಸ್ಥಳದ ಎಸ್ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಮಾಧುರ್ಯ ಜಿ. ಅವರು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮಾಧುರ್ಯ ಅವರ ಈ ಅಪೂರ್ವ ಸಾಧನೆ ಅವರ ಶಾಲೆ, ಹೆತ್ತವರು ಹಾಗೂ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಗೆ ಕಾರಣವಾಗಿದೆ. ಮಾಧುರ್ಯ ಅವರ ಈ ಅದ್ಭುತ ಯಶಸ್ಸಿನ ಹಿಂದೆ ಅವರ ನಿರಂತರ ಪರಿಶ್ರಮ, ಶಾಲಾ ಶಿಕ್ಷಕರ ಸೂಕ್ತ ಮಾರ್ಗದರ್ಶನ ಹಾಗೂ ಪೋಷಕರ ನಿರಂತರ ಪ್ರೋತ್ಸಾಹವಿದೆ. ಪ್ರಸ್ತುತ ಈ ಸಾಧನೆ ಇಡೀ ರಾಜ್ಯದ ಇತರ ವಿದ್ಯಾರ್ಥಿಗಳಿಗೆ ದೊಡ್ಡ ಮಾದರಿಯಾಗಿದೆ.







