ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಭಾ.ಜ.ಪ ಉಪಾಧ್ಯಕ್ಷ, ಕರ್ನಾಟಕ ಸರ್ಕಾರದ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರ ದೇರಳಕಟ್ಟೆಯ ನಿವಾಸಕ್ಕೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಘುಮಂತು ಕಾರ್ಯ ದ ಚಟುವಟಿಕೆ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.




ಶಿಕ್ಷಣ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ (ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ) ರವೀಂದ್ರ ಶೆಟ್ಟಿ ಅವರು ಸಲ್ಲಿಸುತ್ತಿರುವ ಗಣನೀಯ ಸೇವೆಯನ್ನು ಗುರುತಿಸಿ, ಅವರಿಗೆ ಶಾಲು ಹೊದಿಸಿ, ಭಗವದ್ಗೀತೆ ನೀಡಿ ಆತ್ಮೀಯವಾಗಿ ಗೌರವಿಸಿಸಲಾಯಿತು.
ಈ ಸಂದರ್ಭದಲ್ಲಿ ರವೀಂದ್ರ ಶೆಟ್ಟಿ ಅವರು ತಾನು ಬರೆದ ಅಲೆಮಾರಿ ಜೀವನ ಪುಸ್ತಕವನ್ನು ನೀಡಿ ಮಾತನಾಡುತ್ತಾ ಸಮಾಜದ ಪ್ರೀತಿ ಮತ್ತು ಗೌರವ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಗ್ರಾಮೀಣ ಭಾಗದ ಶಿಕ್ಷಣ ಹಾಗೂ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗಾಗಿ ನನ್ನ ಸೇವೆ ನಿರಂತರವಾಗಿರಲಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಘುಮಂತು ಕಾರ್ಯ ವಿಭಾಗ ಸಂಯೋಜಕ ಸುದರ್ಶನ್ ಕನ್ಯಾಡಿ, ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ, ದೀಕ್ಷಿತ್ ಡಿ ವಿ ಧರ್ಮಸ್ಥಳ, ಪ್ರಮೋದ್ ದಿಡುಪೆ,ಶರತ್ ಶೆಟ್ಟಿ,ಕರುಣಾಕರ ಮಾಚಾರು ಹಾಗೂ ಪ್ರಸಾದ್ ಪಿಲಿಗೂಡು ಉಪಸ್ಥಿತರಿದ್ದರು.







