ಬೆಳ್ತಂಗಡಿ; ಗಣಿತ ಪ್ರಯೋಗಾಲಯ, ಸಮಾಜ ಪ್ರಯೋಗಾಲಯ, ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಸಹಿತ ಅನೇಕ ದಾಖಲೆಗಳನ್ನು ಒಳಗೊಂಡಿರುವ ನಡ ಸರಕಾರಿ ಪ್ರೌಢ ಶಾಲೆಗೆ ಗುರುವಾಯನಕರೆಯ ಯುವ ಉದ್ಯಮಿ, ಪ್ರಸ್ತುತ ಅಮೇರಿಕಾದಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಷ್ಣು ಪ್ರಸಾದ ಶೆಣೈ ಅವರು ಅತ್ಯುತ್ತಮ ದರ್ಜೆಯ ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ.

ತಾಲೂಕು ಉಪ ತಹಶೀಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವೈ.ಪಿ ಶೆಣೈ (ಪಾಂಡುರಂಗ ಶೆಣೈ) ಅವರ ಪುತ್ರರಾಗಿರುವ ವಿಷ್ಣು ಪ್ರಸಾದ್ ಶೆಣೈ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ.


ಆಯ್ದ ಸರಕಾರಿ ಶಾಲೆಯ ಮಕ್ಕಳಿಗೆ ವಾರ್ಷಿಕ ಉಪಯೋಗದ ಎಲ್ಲಾ ಪುಸ್ತಕಗಳನ್ನು ಕೊಡುಗೆಯಾಗಿ ಈ ಹಿಂದೆ ನೀಡಿರುವ ಅವರು ಇದೀಗ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ನಡ ಸರಕಾರಿ ಪ್ರೌಢ ಶಾಲೆಗೆ ಈ ಕೊಡುಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.







