ಮಡಂತ್ಯಾರು: ಮಡಂತ್ಯಾರು ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನ ದಲ್ಲಿ 2027ರಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರದಲ್ಲಿ ನಡೆಯುಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ಸಮಾಲೋಚನೆ ಸಭೆ ದೇಗುಲದ ಸಭಾಂಗಣ ದಲ್ಲಿ ಏಪ್ರಿಲ್ 15ರಂದು ನಡೆಯಿತು.
ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವ ದ ಸಂದರ್ಭ ನಡೆಯಲಿರುವ ಜೀರ್ಣೋದ್ಧಾರ ಕಾಮಗಾರಿ ಗಳ ಬಗ್ಗೆ ಆಡಳಿತ ಮೋಕ್ತೆಸರರು ಹಾಗೂ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪುನೀತ್ ಕುಮಾರ್ ಮಡಂತ್ಯಾರ್ ಮಾತನಾಡಿ, ಎಲ್ಲರ ಸಹಕಾರ ಕೋರಿದರು.
ಪ್ರಧಾನ ಅರ್ಚಕರಾದ ಶ್ರೀ ಪೇಜಾವರ ಟಿ. ವಿ. ಶ್ರೀಧರ ರಾವ್ ಮಾತನಾಡಿ, ಮೇ 17 ರಂದು ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಯಲಿದೆ ಗ್ರಾಮಸ್ಥರು ಪಾಲ್ಗೊಳ್ಳಬೇಕಾಗಿ ವಿನಂತಿಸಿದರು.. ದೇಗುಲದಲ್ಲಿ ಇತ್ತೀಚಿಗೆ ನಡೆದ ಅಭಿವೃದ್ಧಿ ಕಾಮಗಾರಿಗಳು ಬಗ್ಗೆ ಕೂಡ ವಿವರಿಸಿದರು.
ನೂತನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ವೀರೇಂದ್ರ ಕುಮಾರ್ ಮಡಂತ್ಯಾರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇವರೊಂದಿಗೆ 15 ಜನ ಸಮಿತಿ ಸದಸ್ಯರ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಸರ್ವರೂ ಸಹಕರಿಸಬೇಕು ಎಂದು ವಿನಂತಿಸಿದರು.
ಮಾಜಿ ಆಡಳಿತ ಮೋಕ್ತೆಸರರಾದ ವಿಠಲ ಶೆಟ್ಟಿ ಮೂಡಾಯೂರು, ರತ್ನಾಕರ ಶೆಟ್ಟಿ ಮಾತನಾಡಿದರು. ಹಿರಿಯ ಗ್ರಾಮಸ್ಥರು ಸಲಹೆ ಸೂಚನೆ ನೀಡಿದರು.
ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.







