ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದ ಅಟ್ರಿಂಜೆ ನಿವಾಸದ ನಾಲ್ಕು ಕೊರಗ ಸಮುದಾಯದ ಕುಟುಂಬಗಳಿಗೆ ಇಂದು ಶಾಸಕ ಹರೀಶ್ ಪೂಂಜರವರು ಹಕ್ಕುಪತ್ರ ವಿತರಿಸುವ ಮೂಲಕ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟಿದ್ದಾರೆ.
ತಾಲೂಕಿನ ಸುಲ್ಕೇರಿ ಗ್ರಾಮದ ಅಟ್ರಿಂಜೆ ನಿವಾಸಿಗಳಾದ ಶ್ರೀಮತಿ ಹರಿಣಾಕ್ಷಿ ಕೋಂ. ಹರೀಶ್ ಕೊರಗ, ಶ್ರೀಮತಿ ಕಮಲ ಕೋಂ. ಸುರೇಶ್ ಕೊರಗ, ಬಾಬು ಕೊರಗ ಬಿನ್. ಕುಂಡ ಕೊರಗ ಹಾಗೂ ನೀಲಯ್ಯ ಕೊರಗ ಬಿನ್. ಕುಂಡ ಕೊರಗ ಇವರು ಸಲ್ಲಿಸಿದ 94ಸಿ ಅರ್ಜಿಯನ್ನು ಪರಿಗಣಿಸಿ, ಅವರ ಎಲ್ಲಾ ಸರ್ಕಾರಿ ಶುಲ್ಕವನ್ನು ಶಾಸಕರಾದ ಶ್ರೀ ಹರೀಶ್ ಪೂಂಜರವರು ವೈಯಕ್ತಿಕವಾಗಿ ಭರಿಸಿ ಅವರಿಗೆ ಹಕ್ಕುಪತ್ರಗಳನ್ನು ವಿತರಿಸಿದರು.







