ಬೆಳ್ತಂಗಡಿ: ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ನಗರದ ಜನಪ್ರಿಯ ಚಿನ್ನಾಭರಣ ಮಳಿಗೆ ‘ಶೃಂಗಾರ್ ಜುವೆಲ್ಲರ್ಸ್’ ತನ್ನ ಗ್ರಾಹಕರಿಗಾಗಿ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ. ನಗರದ ಮುಖ್ಯರಸ್ತೆ ಸಮೀಪದ ಗೋಕುಲ್ ಆರ್ಕೇಡ್ನಲ್ಲಿ ಕಾರ್ಯಾಚರಿಸುತ್ತಿರುವ ಈ ಮಳಿಗೆಯಲ್ಲಿ ಏಪ್ರಿಲ್ 19 ಮತ್ತು 20ರಂದು ವಿಶೇಷ ರಿಯಾಯಿತಿ ಹಾಗೂ ಉಡುಗೊರೆಗಳ ಸಂಭ್ರಮ ಇರಲಿದೆ.
ನಂಬಿಕೆಗೆ ಇನ್ನೊಂದು ಹೆಸರು “ಶೃಂಗಾರ್”:
ಕಳೆದ ಎರಡೂವರೆ ದಶಕಗಳಿಂದ ಬೆಳ್ತಂಗಡಿಯಲ್ಲಿ ಚಿನ್ನಾಭರಣ ವ್ಯವಹಾರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶೃಂಗಾರ್ ಜುವೆಲ್ಲರ್ಸ್, ನಂಬಿಕೆಗೆ ಹೆಸರಾಗಿದೆ. ಕೇವಲ ಬೆಳ್ತಂಗಡಿ ಮಾತ್ರವಲ್ಲದೆ ನೆರೆಯ ತಾಲೂಕುಗಳಿಂದಲೂ ಗ್ರಾಹಕರು ಇಲ್ಲಿಗೆ ಆಗಮಿಸುತ್ತಿರುವುದು ಇವರ ಗುಣಮಟ್ಟದ ಚಿನ್ನ ಹಾಗೂ ನಗುಮೊಗದ ಸೇವೆಗೆ ಸಾಕ್ಷಿಯಾಗಿದೆ.
ಸಂಗ್ರಹ, ಆಕರ್ಷಕ ವಿನ್ಯಾಸದ ವಿನೂತನ ಚಿನ್ನಾಭರಣಗಳು, ಬೆಳ್ಳಿಯ ಆಭರಣಗಳು, ದೇವತಾ ಪೂಜಾ ಸಾಮಗ್ರಿಗಳು, ಮನಮೋಹಕ ಒಡವೆಗಳು, ಮಕ್ಕಳಿಗೆ ಬೆಳ್ಳಿಯ ಆಭರಣಗಳು, ಉಡುಗೊರೆ ನೀಡಲು ಬೇಕಾದ ಚಿನ್ನ ಲೇಪಿತವಾದ ದೇವರ ಫೋಟೊಗಳು ಮಳಿಗೆಯಲ್ಲಿ ಲಭ್ಯವಿದ್ದು ಅಕ್ಷಯ ತೃತೀಯದ ಸಂದರ್ಭದಲ್ಲಿ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಆಯೋಜಿಸಿರುವ ಈ ವಿಶೇಷ ಆಫರ್ ಸಂದರ್ಭದಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ತಮ್ಮ ಮನಗೊಪ್ಪುವ ಅತ್ಯಾಕರ್ಷಕ ವಿನ್ಯಾಸದ ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ.
ವಿಶೇಷ ಕೊಡುಗೆಗಳು:
ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣ ಪ್ರಿಯರಿಗೆ ಶೃಂಗಾರ್ ಜುವೆಲ್ಲರ್ಸ್ ನಲ್ಲಿ ಪ್ರತೀ 1 ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ 1 ಗ್ರಾಂ ಬೆಳ್ಳಿನಾಣ್ಯ ಉಚಿತವಾಗಿ ಪಡೆಯುವ ಅವಕಾಶವಿದೆ. ಎಲ್ಲಾ ಬೆಳ್ಳಿಯ ಆಭರಣ, ಪೂಜಾ ಸಾಮಾಗ್ರಿಗಳ ಖರೀದಿ ಮೇಲೆ 1 ಕೆಜಿಗೆ 5000 ರೂ. ರಿಯಾಯಿತಿ ಪಡೆಯಬಹುದಾಗಿದೆ. ಗ್ರಾಹಕರು ಯಾವುದೇ ತಮ್ಮ ಹಳೆಯ 916 ಹಾಲ್ ಮಾರ್ಕ್ ಚಿನ್ನಾಭರಣಗಳ ವಿನಿಮಯಕ್ಕೆ ಶೇ.100 ಬೆಲೆಯನ್ನು ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.







