ಬೆಂಗಳೂರು : ಆಲ್ ಇಂಡಿಯಾ ಸ್ಟಾಕ್ ವಿಟ್ನೆಸ್ ರಿಫಾರ್ಮ್ ಎಕ್ಸ್ಪರ್ಟ್ ಕಮಿಟಿ ಸದಸ್ಯರಾಗಿ ಆಯ್ಕೆಯಾಗಿರುವ ಕೇಂದ್ರ ಸರ್ಕಾರದ ವಕೀಲರಾದ ಶ್ರೀ ರಾಜಶೇಖರ್ ಹಿಲ್ಯಾರ್ ಅವರಿಗೆ ಬೆಂಗಳೂರು ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಮಯದಲ್ಲಿ ನ್ಯಾಯಮೂರ್ತಿಗಳಾದ ಶ್ರೀ ಕೆ.ವಿ ಅರವಿಂದ್ ಅವರು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಸುಬ್ಬಾರೆಡ್ಡಿ ಅವರು, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. H.V. ಪ್ರವೀಣ್ ಗೌಡ, ಉಪಾಧ್ಯಕ್ಷರಾದ ಶ್ರೀ C.S. ಗಿರೀಶ್ ಕುಮಾರ್, ಖಜಾಂಚಿಗಳಾದ ಶ್ರೀಮತಿ ಶ್ವೇತಾ ರವಿಶಂಕರ್, ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಕೀಲ ಮಿತ್ರರು ಉಪಸ್ಥಿತರಿದ್ದರು.







