ಮುಂಡಾಜೆ : ಹೃದಯಾಘಾತದಿಂದ ಯುವಕನೋರ್ವ ನಿಧನ ಹೊಂದಿದ ಘಟನೆ ಸೋಮಂತ್ತಡ್ಕದಲ್ಲಿ ನಡೆದಿದೆ.
ಸೋಮಂತ್ತಡ್ಕದ ಅಗರಿ ರಸ್ತೆ ನಿವಾಸಿ ಪುನೀತ್ ಕುಮಾರ್ ಎಸ್. (35) ಹೃದಯಾಘಾತದಿಂದ ಮೃತಪಟ್ಟ ಯುವಕ.
ಬೆಳಗಿನ ಜಾವ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಬಳಿಕ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಅವರು ಪ್ರಸ್ತುತ ಮನೆಯಿಂದಲೇ ಉದ್ಯೋಗ ನಿರ್ವಹಿಸುತ್ತಿದ್ದರು. ಮೃತರು ತಾಯಿ, ಪತ್ನಿ ಹಾಗೂ ಪುತ್ರರನ್ನು ಅಗಲಿದ್ದಾರೆ.







