ಗಂಡಿಬಾಗಿಲು: ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇಲ್ಲಿ ದಿನಾಂಕ:08.05.2026ರಂದು ದಿವಂಗತ ವಸಂತ ಬಂಗೇರರವರ 2ನೇ ಪುಣ್ಯಸ್ಮರಣೆಯ ಅಂಗವಾಗಿ ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘ(ನಿ.) ಹಾಗೂ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘ (ರಿ.) ಬೆಳ್ತಂಗಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅನ್ನದಾನ ಕಾರ್ಯಕ್ರಮವು ನೆರವೇರಿತು.
ದಿವಂಗತ ವಸಂತ ಬಂಗೇರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು. ಶ್ರೀಗುರುದೇವ ವಿವಿಧೋದ್ದೇಶ ಸಹಕಾರ ಸಂಘ(ನಿ.) ಇದರ ಅಧ್ಯಕ್ಷರಾದ ಶ್ರೀ ಭಗೀರಥ ಜಿ, ನಿರ್ದೇಶಕರಾದ ಶ್ರೀ ಚಿದಾನಂದ ಪೂಜಾರಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘ (ರಿ.) ಇದರ ಅಧ್ಯಕ್ಷರಾದ ಶ್ರೀ ಜಯ ವಿಕ್ರಂ, ಕಲ್ಲಾಪು, ಶ್ರೀಯುತ ರಕ್ಷಿತ್ ಶಿವರಾಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ). ಶ್ರೀ ಮನೋಹರ್ ಇಳಂತಿಲ, ಶ್ರೀಮತಿ ತನುಜ ಶೇಖರ್, ಶ್ರೀ ಅಶ್ವಥ್ ಕುಮಾರ್, ಶ್ರೀ ಕೀರ್ತನ್ ಕುಮಾರ್, ಶ್ರೀಮತಿ ರೂಪವತಿ, ಸಿಯೋನ್ ಆಶ್ರಮದ ಆಡಳಿತ ನಿರ್ದೇಶಕರಾದ ಶ್ರೀಯುತ ಡಾ.ಯು.ಸಿ.ಪೌಲೋಸ್ ರವರು, ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ., ಆಡಳಿತಾಧಿಕಾರಿ ಶ್ರೀಮತಿ ಶೋಭಾ ಯು.ಪಿ. ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.







