ಕರ್ನಾಟಕದಲ್ಲಿ ಮೈಲ್ಡ್ ಮತ್ತು ಲಾಗರ್ ಬಿಯರ್ ಗಳ ಬೆಲೆಗಳು 20-25 ಶೇಕಡಾ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಬಿಯರ್ ಮತ್ತು ಸ್ಪಿರಿಟ್ಸ್ ಗಳಿಗೆ ‘ಆಲ್ಕೊಹಾಲ್ ಇನ್ ಬೇವರೇಜ್ (AiB) ನೀತಿಯಡಿ ಹೊಸ ದರಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ನೂತನ ಅಬಕಾರಿ ನೀತಿಯಿಂದ ಬಿಯರ್ ದರದಲ್ಲಿ ಶೇ 25 ರಷ್ಟು ಇಳಿಕೆ ಆಗಿದ್ದು, 5 ಶೇಕಡಾ ಆಲ್ಕೊಹಾಲ್ v/v (volume/volume) ಹೊಂದಿರುವ ಬಿಯರ್ ಗಳ ಗರಿಷ್ಠ ಚಿಲ್ಲರೆ ಬೆಲೆ (MRP) 20 ರಿಂದ 25 ಶೇಕಡಾ ಕಡಿಮೆಯಾಗಿದೆ ಎಂದು ವರದಿ ಆಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಕಿಂಗ್ ಫಿಶರ್ ಪ್ರೀಮಿಯಂ ಮತ್ತು ಅಲ್ಟ್ರಾ 650 ಎಂಎಲ್ ಬಾಟಲಿಗಳ ಮೇಲೆ ಸುಮಾರು 75 ರೂ. ಇಳಿಕೆಯಾಗಿದ್ದರೆ, ಹೈನೆಕೆನ್ ಮೇಲೆ 70 ರೂ., ಯುಬಿ ಎಕ್ಸ್ಪೋರ್ಟ್ ಮೇಲೆ 25 ರೂ. ಹಾಗೂ ಬಡ್ ವೈಸರ್ ಪ್ರೀಮಿಯಂ ಮೇಲೆ 20 ರೂ.ಗಳವರೆಗೆ ಕಡಿಮೆ ಆಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ರಾಜ್ಯ ಸರ್ಕಾರ ಪ್ರೀಮಿಯಂ ಸ್ಕಾಚ್ ವಿಸ್ಕಿಗಳ ಬೆಲೆಯಲ್ಲಿಯೂ 20 ಶೇಕಡಾ ಇಳಿಕೆ ಮಾಡಿದೆ. 750 ಮಿ.ಲೀ ಬಾಟಲಿಯ ಬ್ಲಾಕ್ ಲೇಬಲ್ ಮತ್ತು ಚಿವಾಸ್ ರೀಗಲ್ ದರವು 5190 ರೂಪಾಯಿಗಳಿಂದ 4100 ರೂಪಾಯಿಗೆ ಇಳಿಕೆಯಾಗಿದೆ. ಇದ್ರಿಂದ ಶ್ರೀಮಂತ ಮದ್ಯ ಪ್ರಿಯರಿಗೂ ಖುಷಿ ವಿಚಾರವಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಈ AiB ತೆರಿಗೆ ನೀತಿಯನ್ನು ಜಾರಿಗೆ ತಂದಿದ್ದು, ಈ ಹಿಂದೆ ಇದ್ದ 16 ತೆರಿಗೆ ಸ್ಲ್ಯಾಬ್ಗಳನ್ನು ಈಗ 8ಕ್ಕೆ ಇಳಿಸಲಾಗಿದೆ. 60 ವರ್ಷಗಳ ಹಳೆಯ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್ ಅಂಶದ ಆಧಾರದ ಮೇಲೆ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಆಲ್ಕೋಹಾಲ್ ಇನ್ ಬೇವರೇಜ್, ವಿವಿಧ ಮದ್ಯದಲ್ಲಿನ ಮದ್ಯದ ಪ್ರಮಾಣ ಆಧಾರಿತ ಹೊಸ ಅಬಕಾರಿ ನೀತಿಯನ್ನ ಜಾರಿಗೆ ತರಲಾಗಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ಅಬಕಾರಿಯಲ್ಲಿ ಈ ಮಹತ್ವದ ಬದಲಾವಣೆ ಆಗಿದೆ. ಆದ್ರೆ ಕಳೆದ ಮೂರು ವರ್ಷದ ಅವಧಿಯಲ್ಲಿ ಕನಿಷ್ಠ ಮೂರರಿಂದ 6 ಬಾರ ವಿವಿಧ ರೀತಿಗಳಲ್ಲಿ ಮದ್ಯದ ಬೆಲೆಯು ಹೆಚ್ಚಳವಾಗಿದೆ. ಈ ಮದ್ಯ ಬೆಲೆ ಏರಿಕೆಯನ್ನು ಮದ್ಯ ಪ್ರಿಯರು ವಿರೋಧಿಸುತ್ತಲೇ ಬಂದಿದ್ದಾರೆ. ಇದೀಗ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಎಣ್ಣೆ ಪ್ರಿಯರು ಖುಷ್ ಆಗಿದ್ದಾರೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)
ವಿದೇಶಿ ಮೂಲದ ಪ್ರೀಮಿಯಂ ಬ್ರಾಂಡ್ಗಳಾದ ಕಂಪನಿಗಳ ಮದ್ಯದ ಬೆಲೆ ಶೇ 16 ರಿಂದ 20 ರಷ್ಟು ಇಳಿಕೆಯಾಗಲಿದೆ. 6 ರಿಂದ 8ನೇ ಸ್ಲ್ಯಾಬ್ನಲ್ಲಿ ಬರುವ ಈ ಪಾನೀಯಗಳ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 10-15 ರಷ್ಟು ಕಡಿಮೆ ಮಾಡಲಾಗಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)







