ಮಂಗಳೂರು: ಶ್ರೀ ಭದ್ರಕಾಳಿ ಚೆಂಡೆ ತಂಡದ ಮಾಲೀಕರಾದ ಮಂಗಳೂರಿನ ಯೆಯ್ಯಾಡಿ ಗುಂಡಳಿಕೆ ನಿವಾಸಿ ೩೫ ರ ಹರೆಯದ ಪ್ರಜ್ವಲ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಜ್ವಲ್ ರವರು ಹಲವು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅನಾರೋಗ್ಯದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನ ಸ್ನೇಹಿತರು , ಆಪ್ತ ವಲಯಕ್ಕೆ ಆಘಾತವನ್ನು ನೀಡಿದೆ.







