ಬೆಳ್ತಂಗಡಿ : ಬೆಳ್ತಂಗಡಿ ಬಳಿಯ ರೆಂಕೆದಗುತ್ತು ಎಂಬಲ್ಲಿರುವ ‘ಸಿರಿ ಮಾತೃಶ್ರೀ ಇಂಡಸ್ಟ್ರೀಯಲ್ ಪಾರ್ಕ್’ನಲ್ಲಿ ಜಿಯೋ ಸಂಸ್ಥೆಯ ನೂತನ ಮೊಬೈಲ್ ಟವರ್ ಕಾರ್ಯಾರಂಭ ಮಾಡಿದೆ.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಈ ನೂತನ ಜಿಯೋ ಮೊಬೈಲ್ ಟವರನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಇದರಿಂದಾಗಿ ಇಲ್ಲಿನ ನೌಕರರು, ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ಹಾಗೂ ಸಂದರ್ಶಕರಿಗೆ ಉತ್ತಮ ಗುಣಮಟ್ಟದ ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕ ಸೌಲಭ್ಯ ಲಭ್ಯವಾಗುತ್ತದೆ. ಇದರೊಂದಿಗೆ ಆನ್ಲೈನ್ ಶಿಕ್ಷಣ, ಡಿಜಿಟಲ್ ವಾಣಿಜ್ಯ, ತ್ವರಿತ ಸಂವಹನ, ಉದ್ಯಮ ನಿರ್ವಹಣೆ ಹಾಗೂ ಗ್ರಾಹಕರ ಸೇವೆಗಳ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ.







