ಮುಂಡಾಜೆ; ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಮುಂಡಾಜೆ ಇಲ್ಲಿ ಬಕ್ರೀದ್ ಪ್ರಯುಕ್ತ ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಪ್ರಧಾನ ಧರ್ಮಗುರು ಸಿರಾಜುದ್ದೀನ್ ಸಅದಿ ಗಡಿಯಾರ್ ನೇತೃತ್ವದಲ್ಲಿ ಖುತುಬಾ ಪಾರಾಯಣ ಹಾಗೂ ಬಕ್ರೀದ್ ಸುನ್ನತ್ ನಮಾಝ್ ನಡೆಯಿತು.


ಸಹಾಯಕ ಧರ್ಮಗುರು ತ್ವಾಹಿರ್ ಸಅದಿ ನಾವೂರು ತಕ್ಬೀರ್ ಗೆ ನೇತೃತ್ವ ನೀಡಿದರು. ಮಸ್ಜಿದ್ ಅಧ್ಯಕ್ಷ ಅಬ್ದುಲ್ ಬಶೀರ್ ಬಶೀರ್ ನೆಕ್ಕರೆ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಇಸ್ಮಾಯಿಲ್ ಕುರುಡ್ಯ, ಕೋಶಾಧಿಕಾರಿ ಅಬ್ದುಲ್ಲ ಹಾಜಿ ರೋಝ, ಉಪಾಧ್ಯಕ್ಷ ಕೆರೀಂ ಕೆ.ಎಸ್, ಜೊತೆ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಮುಂಡಾಜೆ, ಹಾಗೂ ಜಮಾಅತ್ ಕಮಿಟಿ, ಎಸ್ವೈಎಸ್, ಎಸ್ಸೆಸ್ಸೆಫ್, ಕರ್ನಾಟಕ ಮುಸ್ಲಿಂ ಜಮಾಅತ್ ಪದಾಧಿಕಾರಿಗಳು, ಹಿರಿಯ ಕಿರಿಯ ಸದಸ್ಯರು ಭಾಗವಹಿಸಿದ್ದರು.
ಜಮಾಅತ್ ನಿಂದ ಮರಣ ಹೊಂದಿದ ವ್ಯಕ್ತಿಗಳ ಸ್ಮರಣೆಯಲ್ಲಿ ಯಾಸೀನ್ ಹದಿಯ ಮಾಡಲಾಯಿತು. ಬಳಿಕ ಸಿಹಿ ತಿಂಡಿ ವಿತರಿಸಲಾಯಿತು.







