ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿರುವ ಭಾರತದ ಉಪರಾಷ್ಟ್ರಪತಿ ಪಿ. ರಾಧಾಕೃಷ್ಣನ್ ಅವರು ಕ್ಷೇತ್ರದಲ್ಲಿ ತಮ್ಮ ಅಪಾರ ಸರಳತೆಯನ್ನು ಮೆರೆಯುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.



ಧರ್ಮಸ್ಥಳಕ್ಕೆ ಭೇಟಿ ನೀಡಿದ ಅವರು, ಮೊದಲು ದೇವಸ್ಥಾನಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವರ ದರ್ಶನದ ಬಳಿಕ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ನೂರಾರು ಭಕ್ತರತ್ತ ತೆರಳಿ, ಹಸ್ತಲಾಘವ ಮಾಡುವ ಮೂಲಕ ತಮ್ಮ ಸಾಧಾರಣ ಮತ್ತು ವಿನಮ್ರ ವ್ಯಕ್ತಿತ್ವವನ್ನು ತೋರ್ಪಡಿಸಿದರು. ದೇವರ ದರ್ಶನ ಹಾಗೂ ಭಕ್ತರ ಭೇಟಿಯ ನಂತರ ಉಪರಾಷ್ಟ್ರಪತಿಗಳು ಧರ್ಮಸ್ಥಳದ ಹೆಮ್ಮೆಯಾಗಿರುವ ‘ಅನ್ನಪೂರ್ಣ ಛತ್ರ’ಕ್ಕೆ ಭೇಟಿ ನೀಡಿದರು.







