ಮೂಡುಬಿದಿರೆ: ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ (ರಿ) ಚಿಟ್ಟೆಮಾರ್, ಸಂಪಿಗೆ , ಪುತ್ತಿಗೆ ವತಿಯಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದೊಂದಿಗೆ ನಿರ್ಮಿಸಿರುವ




ಸುಂದರ ಪರಿಸರದಲ್ಲಿ ಭವ್ಯವಾದ “ಪದ್ಮಾವತಿ ಜೈನ ಸಮುದಾಯ ಭವನ ಸೋಮವಾರ (1-6-2026) ಶುಭ ಆರಂಭವಾದಿದ್ದು, ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ
ಮಕ್ಕಿಮನೆ ಕಲಾವೃಂದ ಬಳಗದಿಂದ ಜಿನ ಭಜನಾ ಕಾರ್ಯಕ್ರಮ ಹಾಗೂ ವೈವಿಧ್ಯತೆಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು ಎಲ್ಲರ ಮೆಚ್ಚುಗೆ ಪಡೆಯಿತು.
ಪ್ರಮಯಿ ಜೈನ್ ಮೂಡುಬಿದಿರೆ ನಿರೂಪಿಸಿದರು. ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ ( ರಿ) ಅಧ್ಯಕ್ಷ ನಾಗವರ್ಮ ಜೈನ್, ಕಾರ್ಯದರ್ಶಿ ಸುನೀಶ್ ಕುಮಾರ್ ಜೈನ್ ಕಡಂಬು ಹಾಗೂ ಡಾ.ಅನುಷಾ ನಾಗವರ್ಮ ಜೈನ್ ಮೊದಲಾದವರು ಉಪಸ್ಥಿತರಿದ್ದರು ಎಲ್ಲ ಕಲಾವಿದರನ್ನು ಗೌರವಿಸಿದರು.







