ಉಡುಪಿ: ದೇವರು ವೈಕುಂಠದಲ್ಲಿ ಇರುವುದಿಲ್ಲ ದೇವರು ದೇವಾಲಯದಲ್ಲಿ ಇರುವುದಿಲ್ಲ ಯೋಗಿಗಳ ಹೃದಯದಲ್ಲಿ ಇಲ್ಲ ತಪಸ್ಸುಗಳ ಹೃದಯದಲ್ಲೂ ಇಲ್ಲ ದೇವರು ಎಲ್ಲಿರುತ್ತಾನೆಂದರೆ ಯಾರು ಶ್ರದ್ಧೆಯಿಂದ , ಬದ್ಧತೆಯಿಂದ, ಭಕ್ತಿಯಿಂದ ನಿಷ್ಠೆಯಿಂದ ಕಾಯಕ ಮಾಡುತ್ತಾರೆ ಅವರ ಹೃದಯದಲ್ಲಿ ಇರುತ್ತಾರೆ .





ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳಲ್ಲಿ ಅತ್ಯಂತ ಪ್ರೀತಿ ಪಾತ್ರವಾದ , ವಿದ್ಯಾಭಾರತಿ ಕರ್ನಾಟಕ ಆಯೋಜಿಸುವ ಕಾರ್ಯಚಟುವಟಿಕೆಗಳನ್ನು ಮುತುವರ್ಜಿಯಿಂದ ಮಾಡುತ್ತಿರುವ ಶಾಲೆ ಅಮೃತ ಭಾರತಿಯಾಗಿದೆ. ಈ ಶೈಕ್ಷಣಿಕ ವರ್ಷ ವಿದ್ಯಾಭಾರತಿ ಕರ್ನಾಟಕದ ಅಮೃತ ಮಹೋತ್ಸವ ವರ್ಷ. ಈ ಶುಭ ಸಂದರ್ಭದಲ್ಲಿ ಮೊದಲ ಕಾರ್ಯಕ್ರಮ ಈ ಸಂಸ್ಥೆಯಲ್ಲಿ ನಡೆದದ್ದು ಹರ್ಷ ತಂದಿದೆ .
ತರಬೇತಿಯನ್ನು ಪಡೆದವರು ಅತ್ಯಂತ ಬದ್ಧತೆಯಿಂದ ಇರಬೇಕು ಎಂದು ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಅಧ್ಯಕ್ಷರು ಪಾಂಡುರಂಗ ಪೈ ಸಿದ್ದಾಪುರ ನುಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಪಿ .ಆರ್ .ಎನ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ಗಳು ಹೆಬ್ರಿ ಜಂಟಿ ಆಶ್ರಯದಲ್ಲಿ ನಡೆದ ಒಂದು ದಿನದ ಪಂಚಪದಿಯ ಕಲಿಕಾ ವರ್ಗ – ಪಾಠ ಯೋಜನೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಹೆಬ್ರಿಯ ಅಮೃತ ಭಾರತಿ ಅನ್ನಪೂರ್ಣ ಸಭಾಂಗಣದಲ್ಲಿ ಪಾಠಯೋಜನೆ ತರಬೇತಿ ಕಾರ್ಯಾಗಾರ ನಡೆಯಿತು.
ವೇದಿಕೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಉಪಾಧ್ಯಕ್ಷರು
ಗುರುದಾಸ ಶೆಣೈ ಹೆಬ್ರಿ ಅಮೃತ ಭಾರತಿ ವಿದ್ಯಾಲಯ ಹೈಸ್ಕೂಲ್ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅಪರ್ಣ ಆಚಾರ್ , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರು ಅರುಣ್ ಎಚ್. ವೈ ಉಪಸ್ಥಿತರಿದ್ದರು.
ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ, ಹೈಸ್ಕೂಲ್ ವಿಭಾಗದ 57 ಗುರೂಜಿ ಮಾತಾಜಿಯವರಿಗೆ ಕನ್ನಡ, ಹಿಂದಿ ಇಂಗ್ಲಿಷ ,ಸಂಸ್ಕೃತ, ಸಮಾಜ ವಿಜ್ಞಾನ ,ವಿಜ್ಞಾನ, ಗಣಿತ ಪಾಠ ಯೋಜನೆ ತರಬೇತಿಯನ್ನು ನೀಡಲಾಯಿತು .
ಸಂಪನ್ಮೂಲ ವ್ಯಕ್ತಿಗಳಾಗಿ ಕನ್ನಡ ಶ್ರೀಮತಿ ಮಮತಾ ಹೆಗ್ಡೆ, ಗಣಿತ ಶ್ರೀಮತಿ ಮಾಲಾಶ್ರೀ .ಎಸ್ ಹೆಬ್ರಿ,ಇಂಗ್ಲೀಷ್ ಶ್ರೀಮತಿ ಪ್ರೀತಿ ಬಿ.ಕೆ ,ಸಮಾಜ ವಿಜ್ಞಾನ ಪರಶು ನಿರ್ವಹಿಸಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ ಹೈಕಾಡಿ, ಚಾರ ಪಾಠಯೋಜನೆ ಕಾರ್ಯಾಗಾರ ವನ್ನು ಸಂಘಟಿಸಿ ನಿರೂಪಿಸಿ ವಂದಿಸಿದರು.







