ಕಲ್ಲಡ್ಕ : ಪ್ರಕೃತಿ ಇದ್ದರೆ ನಾವು ಪ್ರಕೃತಿ ಮುನಿದರೆ ಸಾವು, ಪರಿಸರ ನಮ್ಮ ಜೀವನದ ಆಧಾರವಾಗಿದೆ ಗಾಳಿ ನೀರು ಮಣ್ಣು ಮರಗಳು ಪ್ರಾಣಿ-ಪಕ್ಷಿ ಮತ್ತು ನಾವು ಎಲ್ಲಾ ಸೇರಿ ಈ ಪರಿಸರದ ಭಾಗವೆ ಆಗಿದ್ದೇವೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ನಾಶ ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಇದರಿಂದ ಹವಾಮಾನ ಬದಲಾವಣೆ ನೀರಿನ ಕೊರತೆ ಮತ್ತು ವಿವಿಧ ಪ್ರಕೃತಿಗೆ ಕೋಪಗಳು ಉಂಟಾಗುತ್ತವೆ.





ಒಂದು ಜೀವ ಎಂಬ ಮಾತಿನಂತೆ ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಹಾರೈಕೆ ಮಾಡಬೇಕು ಪರಿಸರವನ್ನು ಕಾಪಾಡುವ ಸಂಕಲ್ಪವನ್ನು ಎಲ್ಲರೂ ಮಾಡೋಣ ಹಸಿರು ಪರಿಸರ ನಿರ್ಮಾಣಕ್ಕಾಗಿ ಕೈಜೋಡಿಸೋಣ ಎಂಬುದಾಗಿ ವೀರಕಂಬ ಗ್ರಾಮ ವಲಯ ಅರಣ್ಯ ಸಮಿತಿ ಅಧ್ಯಕ್ಷರಾದ ವಿಶ್ವನಾಥ .ಎಂ ರವರು ಹೇಳಿದರರು.
ಅವರು ಜೂನ್ 5 ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ
ವೀರಕಂಭ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಶಾಲಾ ಆವಾರಣದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ ವಿಧ್ಯಾರ್ಥಿಗಳೇ ಪರಿಸರ ರಕ್ಷಣೆಯ ಕರ್ತವ್ಯ, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುವುದು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಹವ್ಯಾಸ, ಮಗು ತನ್ನ ತಾಯಿಯ ಜೊತೆ ಗಿಡವನ್ನು ನೆಟ್ಟು ಪೋಷಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.
ವಿದ್ಯಾರ್ಥಿಗಳ ಪರವಾಗಿ ಕೀರ್ತಿಕ ಎಂಟನೇ ತರಗತಿ ಪರಿಸರದ ಬಗ್ಗೆ ಜಾಗೃತಿ ಹಾಗೂ ರಕ್ಷಣೆಯ ಕುರಿತು ಮಾತನಾಡಿದಳು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷರಾದ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಈಶ್ವರರು ಭಟ್ ರಾಕೋಡ್, ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರಾ, ಪೋಷಕರಾದ ಯತೀಶ್ ಮೈರಾ ,ಶಾಲಾ ಶಿಕ್ಷಕರು,ಶಾಲಾ ಮಕ್ಜಳು ಉಪಸ್ಥಿತರಿದ್ದರು.
.
ದೈಹಿಕ ಶಿಕ್ಷಣ ಶಿಕ್ಷಕ ಇಂದು ಶೇಖರ್ ರವರು ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.







