ಕಡಬ: ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ ಯುವತಿಯೊಬ್ಬರು ಕಾಣೆಯಾಗಿರುವ ಘಟನೆ ವರದಿಯಾಗಿದ್ದು, ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಘಟನೆಯ ಹಿನ್ನೆಲೆ:
ದಿನಾಂಕ 07.06.2026 ರಂದು ಅರ್ ಪೈನ್ ಮೆಹತಾಬ್ ಅವರು ಮನೆಯಿಂದ ಹೊರಗೆ ತೆರಳಿದ್ದು, ಇದುವರೆಗೆ ಮನೆಗೆ ಹಿಂದಿರುಗಿಲ್ಲ. ಅಷ್ಟೇ ಅಲ್ಲದೆ, ಸಂಬಂಧಿಕರ ಮನೆಗಳಿಗೂ ಅವರು ತೆರಳದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 68/2026 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ಯುವತಿಯ ಚಹರೆ ವಿವರ:
ಎತ್ತರ: 162 ಸೆಂ.ಮೀ.
ಮೈಬಣ್ಣ: ಗೋಧಿ ಬಣ್ಣ
ತಲೆ ಕೂದಲು: ಕಪ್ಪು ಬಣ್ಣ
ಶರೀರ: ಸಾಧಾರಣ ಮೈಕಟ್ಟು
ಕಾಣೆಯಾದಾಗ ಧರಿಸಿದ್ದ ಉಡುಪು: ನೀಲಿ ಬಣ್ಣದ ಸೀರೆ ಹಾಗೂ ನೀಲಿ ಬಣ್ಣದ ರವಿಕೆ
ಮಾತನಾಡುವ ಭಾಷೆಗಳು: ಕನ್ನಡ ಮತ್ತು ಉರ್ದು
ಮಾಹಿತಿ ನೀಡಲು ಪೊಲೀಸರ ವಿನಂತಿ:
ಮೇಲ್ಕಂಡ ಚಹರೆ ಮತ್ತು ಭಾವಚಿತ್ರವುಳ್ಳ ಯುವತಿ ಯಾರಿಗಾದರೂ ಕಂಡುಬಂದಲ್ಲಿ ಅಥವಾ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ತಕ್ಷಣವೇ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ಕಾಣೆಯಾದ ಯುವತಿಯ ಪತ್ತೆಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಸಹಕರಿಸಬೇಕಾಗಿ ಕಡಬ ಪೊಲೀಸರು ಕೋರಿದ್ದಾರೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಕಡಬ ಪೊಲೀಸ್ ಠಾಣೆ: 08251-260044
ಮೊಬೈಲ್ ಸಂಖ್ಯೆ: 9480805364




