ಕಾಶಿಪಟ್ಣ: ಸ.ಹಿ.ಪ್ರಾ.ಶಾಲೆ ಕಾಶಿಪಟ್ಣ, ಬೆಳ್ತಂಗಡಿ ತಾಲ್ಲೂಕು ಇಲ್ಲಿಗೆ ದಿನಾಂಕ 11.6.2026ನೇ ಗುರುವಾರದಂದು ತುಳುನಾಡು ಸೇವಾ ಸಂಸ್ಥೆ ಮಂಗಳೂರು ಇದರ ಸ್ಥಾಪಕರಾಗಿರುವ ಶ್ರೀಯುತ ಮಹೇಂದ್ರ ಇವರ ನೇತೃತ್ವದಲ್ಲಿ


ತುಳುನಾಡು ಸೇವಾ ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ಶ್ರೀಮತಿ ಶಬರಿ ಶೆಟ್ಟಿ ಇವರು ತಮ್ಮ ಮಾತೃಶ್ರೀಯವರಾದ ದಿ|| ಹೇಮಾವತಿ ಶೆಟ್ಟಿ ಮುಳಿಹಿತ್ಲು ಇವರ ಸವಿನೆನಪಿಗಾಗಿ 50 ಲೀಟರ್ ವಾಟರ್ ಪ್ಯೂರಿಫೈರನ್ನು ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾಗಿರುವ ಶ್ರೀತ ನಿತಿನ್ ಶೆಟ್ಟಿ ಹಾಗೂ ಸಾಗರ್ ಇವರು ಉಪಸ್ಥಿತರಿದ್ದರು. ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಯುತ ವಿದ್ಯಾನಂದ, ಪಂಚಾಯತ್ ನ ನಿಕಟಪರ್ವ ಅಧ್ಯಕ್ಷರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರರಾಗಿರುವ ಶ್ರೀಯುತ ಸತೀಶ್ ಕೆ, ಎಸ್ ಟಿ ಎಂ ಸಿ ಸದಸ್ಯರಾದ ಶ್ರೀಯುತ ಹಮೀದ್, ಹಾಗೂ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಪಂಚಾಯತ್ ಸಿಬ್ಬಂದಿ ಪ್ರದೀಪ್, ಹಳೆ ವಿದ್ಯಾರ್ಥಿ ಕಾರ್ತಿಕ್ ಉಪಸ್ಥಿತರಿದ್ದು ಶ್ರೀಮತಿ ಶಬರಿ ಶೆಟ್ಟಿ ಇವರನ್ನು ಶಾಲಾ ಪರವಾಗಿ ಪ್ರೀತಿಪೂರ್ವಕವಾಗಿ ಗೌರವಿಸಲಾಯಿತು.






