ಬೆಳಾಲು: ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇವರ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ ಕಾರ್ಯಕ್ರಮ ಜರಗಿತು.

ಯಲಹಂಕ ರೋಟರಿ ಕ್ಲಬ್ ಅಧ್ಯಕ್ಷ, ಬೆಳಾಲು ಶಾಲೆಯ ಹಿರಿಯ ವಿದ್ಯಾರ್ಥಿ ಅಶೋಕ್ ಹೆಬ್ಬಾರ್ ಬೈಸಿಕಲ್ ವಿತರಿಸಿ ಮಾತನಾಡಿ, ಜೀವನದಲ್ಲಿ ಹಣ ಗಳಿಕೆಯೇ ಮುಖ್ಯವಲ್ಲ. ಸಮಾಜಕ್ಕೆ ಸಹಾಯವಾಗುವ ಕನಸುಗಳನ್ನು ಕಟ್ಟಿಕೊಳ್ಳಬೇಕು. ಇಂತಹ ಸೌಲಭ್ಯಗಳನ್ನು ಪಡೆದವರು ಸಮಾಜಕ್ಕೆ ಮರಳಿ ನೀಡುವ ಮನಸ್ಸು ಮತ್ತು ಅವಕಾಶಗಳು ಲಭ್ಯವಾಗಲಿ ಎಂದರು.

ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ, ತನ್ನತನಕ್ಕಿಂತ ಮಿಗಿಲಾಗಿ ಸೇವೆಯನ್ನು ಮಾಡುವ ಮನಸ್ಸು ಎಲ್ಲರಿಗೂ ಒದಗಲಿ ಎಂದರು. ಬೈಸಿಕಲ್ ನೀಡಿದ ರೋಟರಿ ಕ್ಲಬ್ ಯಲಹಂಕದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಭಾಸ್ಕರ್ ಬಿ.ಎಂ., ಸದಸ್ಯರಾದ ಸತೀಶ್ ಶೆಟ್ಟಿ, ಜಯರಾಮ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಶಿಧರ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಕನಿಕ್ಕಿಲ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಗೌಡ ಕುರ್ಕಿಲ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.






